ನಟ ಪ್ರಕಾಶ್ ರೈ ಗೆ ಜೀವ ಬೆದರಿಕೆ: ನನಗಿಲ್ಲಿ ಆತಂಕದ ವಾತವರಣ ಇದೆ ಎಂದ ರೈ

BREAKING NEWS, Kannada News, Regional No Comments on ನಟ ಪ್ರಕಾಶ್ ರೈ ಗೆ ಜೀವ ಬೆದರಿಕೆ: ನನಗಿಲ್ಲಿ ಆತಂಕದ ವಾತವರಣ ಇದೆ ಎಂದ ರೈ 20

ಮಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸ್ವತ ಪ್ರಕಾಶ್ ರೈ ಅವರೇ ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ ಅವರು ತನಗೆ ಬೆದರಿಕೆ ಹಾಕಿದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಅಗಮಿಸಿದ್ದ ವೇಳೆ ಬೆದರಿಕೆ ಹಾಕಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬಂದಿಳಿದ ಸಂದರ್ಭ ಕಾರ್ ಡ್ರೈವರ್ ಬಳಿ ನಾಲ್ಕು ಮಂದಿ ಅಪರಿಚಿತರು ಬಂದು ಪ್ರಶ್ನೆ ಮಾಡಿದ್ದಾರೆ. ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿ, ಕಾರ್ ಡ್ರೈವರ್ ಗೆ ಬೆದರಿಸಿ ಧಮ್ಕಿ ಹಾಕಿದ್ದಾರೆ.

ಕೂಡಲೇ ಪೊಲೀಸರು ಬಂದ ಕಾರಣ ಅಪರಿಚಿತ ವ್ಯಕ್ತಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ, ನನಗೆ ಇಲ್ಲಿ ಆತಂಕದ ವಾತವರಣ ಇದೆ ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.