ನಕಲಿ ಫಾಲೋವರ್ಸ್’ಗಳಿರುವ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ: ರಾಹುಲ್ ಗಾಂಧಿ ಎಷ್ಟನೇ ಸ್ಥಾನ ಗೊತ್ತಾ..!

BREAKING NEWS, International, Kannada News, National, Top News No Comments on ನಕಲಿ ಫಾಲೋವರ್ಸ್’ಗಳಿರುವ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ: ರಾಹುಲ್ ಗಾಂಧಿ ಎಷ್ಟನೇ ಸ್ಥಾನ ಗೊತ್ತಾ..! 39

ಜಿನಿವಾ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಫಾಲೋವರ್ಸ್’ಗಳಲ್ಲಿ 60% ನಕಲಿ ಫಾಲೋವರ್ಸ್ ಗಳಿದ್ದಾರೆ ಎಂದು ಸ್ವಿಜರ್ಲ್ಯಾಂಡ್ ಸಂಸ್ಥೆಯೊಂದು ವರದಿ ನೀಡಿದೆ.

ಸ್ವಿಜರ್ಲ್ಯಾಂಡ್’ನ ಟ್ವಿಪ್ಲೊಮೆಸಿ ಸಂಸ್ಥೆಯೊಂದು ಅತಿ ಹೆಚ್ಚು ಫಾಲೋವರ್ ಗಳಿರುವ ವಿಶ್ವದ ಕೆಲ ನಾಯಕರ ಟ್ವಿಟ್ಟರ್ ಖಾತೆಗಳನ್ನು ಅಧ್ಯಯನ ನಡೆಸಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ನಕಲಿ ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ ಸಿಕ್ಕಿದೆ. ಹಾಗೆಯೇ ಎರಡನೇ ಸ್ಥಾನ ಪೋಪ್ ಫ್ರಾನ್ಸಿಸ್ ಅವರಿಗೆ ಸಿಕ್ಕಿದೆ.

ಪ್ರಧಾನಿ ಮೋದಿ ಅವರ ಖಾತೆಯನ್ನು 4.3 ಕೋಟಿ ಜನ ಫಾಲೋ ಮಾಡುತ್ತಿದ್ದು ಇದರಲ್ಲಿ 60% ಮಂದಿ ನಕಲಿ ಖಾತೆಯನ್ನು ಹೊಂದಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು 1.67 ಕೋಟಿ ಜನ ಫಾಲೋ ಮಾಡುತ್ತಿದ್ದು, ಇದರಲ್ಲಿ 59% ಫಾಲೋವರ್ಸ್ ನಕಲಿ ಎಂದು ಅಧ್ಯಯನ ತಿಳಿಸಿದೆ.

ಟ್ವಿಟ್ಟರ್ ಆಡಿಟ್ ಅಲ್ಗೋರಿದಂ ಮೂಲಕ ಫ್ರೆಂಡ್ಸ್ ಆಗಿರುವ ವ್ಯಕ್ತಿಗಳಿಗೆ ಎಷ್ಟು ಮಂದಿ ಫಾಲೋವರ್ಸ್ ಗಳಿದ್ದಾರೆ..? ಕೊನೆಯ ಬಾರಿ ಟ್ವೀಟ್ ಮಾಡಿದ್ದು ಯಾವಾಗ..? ಇದೂವರೆಗೆ ಎಷ್ಟು ಟ್ವೀಟ್ ಮಾಡಿದ್ದಾರೆ ಈ ವಿಚಾರಗಳನ್ನು ಲೆಕ್ಕ ಹಾಕಿ ಈ ಅಧ್ಯಯನ ನಡೆಸಲಾಗಿದೆ.

ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಒಟ್ಟು 36,96,460 ಮಂದಿ ಫಾಲೋ ಮಾಡುತ್ತಿದ್ದು, ಇದರಲ್ಲಿ 19,80,826 ಮಂದಿ ನಕಲಿ ಫಾಲೋವರ್ಸ್ ಎಂದು ಹೇಳಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 4.79 ಕೋಟಿ ಜನ ಫಾಲೋ ಮಾಡುತ್ತಿದ್ದು ಇದರಲ್ಲಿ 37% ನಕಲಿ ಫಾಲೋವರ್ಸ್ ಇದ್ದಾರೆ.

Related Articles

Leave a comment

Back to Top

© 2015 - 2017. All Rights Reserved.