ನಾಲ್ವಡಿ ಅವರ ಆದರ್ಶ, ಸಾಧನೆ ನಮಗೆ ಸ್ಪೂರ್ತಿದಾಯಕವಾಗಿದೆ: ಯದುವೀರ್

Kannada News, Regional No Comments on ನಾಲ್ವಡಿ ಅವರ ಆದರ್ಶ, ಸಾಧನೆ ನಮಗೆ ಸ್ಪೂರ್ತಿದಾಯಕವಾಗಿದೆ: ಯದುವೀರ್ 20

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶ, ಸಾಧನೆ ನಮಗೆ ಸ್ಪೂರ್ತಿದಾಯಕವಾಗಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇಂದು ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಆಯೋಜಿಸಿದ್ದ “ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್” ರವರ ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೃಷ್ಣರಾಜ ಒಡೆಯರ್ ರವರು ತಮ್ಮ ದೂರ ದೃಷ್ಟಿಯಿಂದ ಶಿಕ್ಷಣ, ಕೈಗಾರಿಕೆ, ನೀರಾವರಿಗೆ ಹೆಚ್ಚು ಒತ್ತು ನೀಡಿದ್ದರು. ಇದರಿಂದ ನಮ್ಮ ಸಮಾಜ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ. ಧರ್ಮದಲ್ಲಿ ಭೇದ ಭಾವವಿಲ್ಲದೆ ಎಲ್ಲಾ ಧರ್ಮಿಯರನ್ನು ಸಮಾನವಾಗಿ ಕಂಡು ಧರ್ಮದ ಆಧಾರದಲ್ಲಿಯೇ ಆಳ್ವಿಕೆ ನಡೆಸಿ ಜನಮನ್ನಣೆ ಗಳಿಸಿದ್ದಾರೆ. ಅವರ ಆದರ್ಶ, ಸಾಧನೆ ನಮಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ನಾನು ಕಲಿಯಬೇಕಾದದ್ದು ಬಹಳಷ್ಟಿದೆ. ನಮ್ಮ ತಾಯಿ ಹೇಳಿದ ಕೆಲವು ಮಾತುಗಳು ಸ್ಮರಣೀಯವಾದದ್ದು. ವಿದೇಶದಲ್ಲಿ ಸಿಗುತ್ತಿದ್ದ ವೈದಕೀಯ ಚಿಕಿತ್ಸೆ ಮೈಸೂರಿನಲ್ಲಿಯು ಸಿಗುವಂತೆ ಮಾಡಿದವರು ಶ್ರೀ ಕೃಷ್ಣರಾಜ ಒಡೆಯರ್ ರವರು ಈ ವಿಷಯ ತಿಳಿದು ನನಗರಿವಿಲ್ಲದೆ ಸಂತೋಷವಾಯಿತು. ಧರ್ಮಗಳನ್ನು ಕಾರ್ಯ ರೂಪಕ್ಕೆ ತರುವುದು ಬಹಳ ಕಷ್ಟ. ಜನ ಸಾಮಾನ್ಯರ ಬದುಕಿಗೆ ಪೂರಕವಾದ ಕೆಲಸವನ್ನು ಮಾಡಿದ ಅವರ ಆಡಳಿತ ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಭಾಗ್ಯವತಿ, ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಸಮಾಜ ಸೇವಕ ಕೆ.ರಘುರಾಮ್, ಉದ್ಯಮಿ ಡಿ.ಟಿ ಪ್ರಕಾಶ್, ಅರಸು ಜಾಗೃತಿ ಅಕಾಡೆಮಿ ಪತ್ರಿಕೆಯ ಡಾ.ಎಂ.ಜಿ.ಆರ್ ಅರಸ್, ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡ, ಪಾಲಿಕೆ ಸದಸ್ಯ ಧೃವರಾಜ, ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್, ಅರಮನೆ ಪೈಲ್ವಾನ ರಂಗ ಜೆಟ್ಟಿಯವರ ಮೊಮ್ಮಗ ಎಂ.ಎನ್ ದೊರೆಸ್ವಾಮಿ, ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.