ಸ್ಯಾಮ್ ಸಂಗ್ ಹಿಂದಿಕ್ಕಿ ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿಯಾದ ಕ್ಸಿಯೋಮಿ!

BREAKING NEWS, Featured, Technology No Comments on ಸ್ಯಾಮ್ ಸಂಗ್ ಹಿಂದಿಕ್ಕಿ ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿಯಾದ ಕ್ಸಿಯೋಮಿ! 20

ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಂಪೆನಿಯನ್ನು ಸೋಲಿಸಿ ಭಾರತದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕ್ಸಿಯೋಮಿ 26.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಸ್ಯಾಮ್ ಸಂಗ್ 24.2% ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ವಿವೋ 6.5%, ಲೆನೆವೊ 5.6%, ಒಪ್ಪೋ 4.9% ಅನುಕ್ರಮವಾಗಿ ನಂತರದ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.

ಐಡಿಸಿ ನಾಲ್ಕನೇಯ ತ್ರೈಮಾಸಿಕ ಅಲ್ಲದೇ 2017ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಎಂದಿನಂತೆ ಸ್ಯಾಮ್ ಸಂಗ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಕ್ಸಿಯೋಮಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ಯಾಮ್ ಸಂಗ್ 24.7%, ಕ್ಸಿಯೋಮಿ 20.9%, ವಿವೋ 9.4%, ಲೆನೆವೋ 7.8%, ಒಪ್ಪೋ 7.5% ಮಾರುಕಟ್ಟೆ ಪಾಲನ್ನು ಹೊಂದಿದೆ.

ನಾಲ್ಕನೇಯ ತ್ರೈಮಾಸಿಕದ ಅತಿ ಹೆಚ್ಚು ಫೀಚರ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ಪೈಕಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 24.1%, ಸ್ಯಾಮ್ ಸಂಗ್ 14.5%, ಟ್ರಾನ್ಸಿಸ್ಸನ್ 8.7%, ಮೈಕ್ರೋಮ್ಯಾಕ್ಸ್ 8.7%, ಲಾವಾ 6.5% ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದೆ.

2017ರಲ್ಲಿ ಭಾರತದಲ್ಲಿ ಒಟ್ಟು 12.4 ಕೋಟಿ ಸ್ಮಾರ್ಟ್ ಫೋನ್ ಮಾರಾಟವಾಗಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳೆಯುತ್ತಿರುವ ಟಾಪ್ 20 ದೇಶಗಳ ಪೈಕಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2016ಕ್ಕೆ ಹೋಲಿಸಿದರೆ 2017ರಲ್ಲಿ 14% ಬೆಳವಣಿಗೆಯಾಗಿದೆ. 2017ರಲ್ಲಿ ದೇಶದಲ್ಲಿ 16.4 ಕೋಟಿ ಫೀಚರ್ ಫೋನ್ ಮಾರಾಟವಾಗಿದ್ದರೆ, 2016ರಲ್ಲಿ 14 ಕೋಟಿ ಮಾರಾಟ ಕಂಡಿತ್ತು.

ವಿಶ್ವದಲ್ಲೇ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಗಳ ಪೈಕಿ ಕ್ಸಿಯೋಮಿ ನಾಲ್ಕನೇಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಆಪಲ್, ಎರಡನೇ ಸ್ಥಾನದಲ್ಲಿ ಸ್ಯಾಮ್ ಸಂಗ್, ಮೂರನೇ ಸ್ಥಾನದಲ್ಲಿ ಹುವಾವೇ ಕಂಪೆನಿಯಿದೆ.

Related Articles

Leave a comment

Back to Top

© 2015 - 2017. All Rights Reserved.