ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ

BREAKING NEWS, Technology No Comments on ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ 13

ನವದೆಹಲಿ: ಭಾರತದ ಇಂಟರ್ನೆಟ್‌ ಸ್ಪೀಡ್ ಹೆಚ್ಚಾಗಿದೆ. ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ 67ನೇ ಸ್ಥಾನ ಸಿಕ್ಕಿದ್ದು, ಮತ್ತು ಮೊಬೈಲ್ ಇಂಟರ್ನೆಟ್‌ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ.

ಇಂಟರ್ನೆಟ್‌ ಸ್ಪೀಡ್ ಟೆಸ್ಟಿಂಗ್ ಮತ್ತು ಅನಾಲಿಸಿಸ್ ಕಂಪೆನಿ ಓಕ್ಲಾ ವಿಶ್ವದ ವಿವಿಧ ದೇಶಗಳ ಇಂಟರ್ನೆಟ್‌ ಸ್ಪೀಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದ ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್ 2017ರ ನವೆಂಬರ್ ನಲ್ಲಿ 18.82 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದ್ದರೆ, 2018ರ ಫೆಬ್ರವರಿಯಲ್ಲಿ 20.72 ಎಂಬಿಪಿಎಸ್‍ಗೆ ಏರಿಕೆಯಾಗಿದೆ ಎಂದು ಹೇಳಿದೆ.

ಕಳೆದ ವರ್ಷ ಭಾರತದ ಫಿಕ್ಸ್ಡ್ ಬ್ರಾಡ್‍ಬ್ಯಾಂಡ್ ಡೌನ್‍ಲೋಡ್ ಸ್ಪೀಡ್ ರ‍್ಯಾಂಕ್ ಪಟ್ಟಿಯಲ್ಲಿ 76ನೇ ಸ್ಥಾನದಲ್ಲಿದ್ದರೆ ಈ ಬಾರಿ 67ನೇ ಸ್ಥಾನಕ್ಕೆ ಏರಿಕೆಯಾಗಿದೆ. ಆದರೆ ಮೊಬೈಲ್ ಇಂಟರ್ನೆಟ್‌ ಡೌನ್‍ಲೋಡ್ ಸ್ಪೀಡ್ ಮಾತ್ರ ಸರಾಸರಿ 8.80 ಎಂಬಿಪಿಎಸ್ ನಿಂದ 9.01 ಎಂಬಿಪಿಎಸ್ ಗೆ ಏರಿಕೆಯಾಗಿದೆ.

ಅತಿವೇಗವಾದ ಮೊಬೈಲ್ ಇಂಟರ್ನೆಟ್‌ ಪಟ್ಟಿಯಲ್ಲಿ ನಾರ್ವೆಗೆ ಮೊದಲ ಸ್ಥಾನ ಸಿಕ್ಕಿದ್ದು, ಅಲ್ಲಿ 62.07 ಎಂಬಿಪಿಎಸ್ ವೇಗದ ಬ್ರಾಡ್‍ಬ್ಯಾಂಡ್ ಸಂಪರ್ಕ ಇದೆ. 161.53 ಎಂಬಿಪಿಎಸ್ ಸರಾಸರಿ ವೇಗವನ್ನು ಹೊಂದುವ ಮೂಲಕ ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ನಲ್ಲಿ ಸಿಂಗಾಪುರಕ್ಕೆ ಮೊದಲ ಸ್ಥಾನ ಸಿಕ್ಕಿದೆ.

ಯಾವ ದೇಶದಲ್ಲಿ ಇಂಟರ್ನೆಟ್‌ ಸ್ಪೀಡ್ ಎಷ್ಟಿದೆ ಎನ್ನುವುದನ್ನು ‘ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ಪಟ್ಟಿ’ಯನ್ನು ಓಕ್ಲಾ ಪ್ರತಿ ತಿಂಗಳು ಬಿಡುಗಡೆಗೊಳಿಸುತ್ತಿರುತ್ತದೆ. ಈ ಮಾಹಿತಿಯನ್ನು ಕಲೆಹಾಕಲು ವಿಶ್ವದಲ್ಲಿ 7,021 ಸರ್ವರ್ ಗಳನ್ನು ಹೊಂದಿದ್ದು, ಇದರಲ್ಲಿ 439 ಅತಿವೇಗವಾದ ಸರ್ವರ್ ಗಳು ಭಾರತದಲ್ಲಿದೆ.

Related Articles

Leave a comment

Back to Top

© 2015 - 2017. All Rights Reserved.