ಬರಲಿದೆ ಬರ್ಗಮನ್‌ ಸ್ಟ್ರೀಟ್‌

Automobile, BREAKING NEWS No Comments on ಬರಲಿದೆ ಬರ್ಗಮನ್‌ ಸ್ಟ್ರೀಟ್‌ 27

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರಿಮೀಯಮ್ ಮಾದರಿಯ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಫ್ಯಾಮಿಲಿ ಉಪಯೋಗಕ್ಕೆ ಎಂದಾದರೆ ಹೆಚ್ಚಿನ ಗ್ರಾಹಕರು ಸ್ಕೂಟರ್‌ಗಳನ್ನೇ ಲೈಕ್‌ ಮಡುತ್ತಾರೆ.

ನಾಡಿಮಿಡಿತ ಅರಿತ ಕಂಪನಿಗಳು ಈಗಾಗಲೇ ತರಹೇವಾರಿಯ ಸ್ಕೂಟರ್‌ಗಳನ್ನು ಪರಿಚಯಿಸಿವೆ. ಹಾಗೇ ಈ ವರ್ಷವೂ ಇನ್ನೊಂದಿಷ್ಟು ಪ್ರೀಮಿಯಂ ಮಾದರಿಯ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಲಿದೆ. ಈ ಸಾಲಿಗೆ ಸೇರುವ ಸ್ಕೂಟರ್‌ಗಳಲ್ಲಿ ಸುಜುಕಿ ಕಂಪನಿಯ ಬರ್ಗಮನ್‌ ಸ್ಟ್ರೀಟ್‌ ಕೂಡ ಒಂದು. ಕಂಪನಿ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಭಾರತದ ವಾಹನ ಸವಾರರಿಗೆ ಚಿರಪರಿಚಿತವಾದ ಸುಜುಕಿ ಕಂಪನಿಯ ಮಹತ್ವಾಕಾಂಕ್ಷೆಯ ಸ್ಕೂಟರ್‌ ಬರ್ಗಮನ್‌ ಸ್ಟ್ರೀಟ್‌. ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಪ್ರೀಮಿಯಂ ಸ್ಕೂಟರ್‌ಗಳಿಗೆ ದೊಡ್ಡ ಸ್ಪರ್ಧೆ ನೀಡಲಿದೆ ಎಂದೇ ಹೇಳಲಾಗುತ್ತಿದೆ. ಸ್ಪರ್ಧಾತ್ಮಕ ಬೆಲೆ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ.

ಹೊಸ ಶೈಲಿಯ ಸ್ಕೂಟರ್‌
ವಿನ್ಯಾಸದಲೇ ಬರ್ಗಮನ್‌ ಸ್ಟ್ರೀಟ್‌ ಸಾಕಷ್ಟು ಅಗ್ರೆಸ್ಸಿವ್‌ ಅನಿಸಿಬಿಡುತ್ತದೆ. ತಲೆ ಎತ್ತಿ ನಿಂತಿರುವ ಜಿಂಕೆಯಂತೆ ತೋರುವ ಸ್ಕೂಟರಿನ ಮುಂಭಾಗ, ಸೀಟ್‌ ವಿನ್ಯಾಸ ಬೇಗ ಗ್ರಾಹಕನ ಗಮನ ಸೆಳೆಯುವಂತಿದೆ.  ಸುಜುಕಿ ಇಂಡಿಯಾ ಮೋಟರ್‌ ಸೈಕಲ್ ವಿಭಾಗ ಭಾರತೀಯ ರಸ್ತೆ ಗುಣಮಟ್ಟಕ್ಕೆ ಅನುಗುಣವಾಗಿ ಈ ಸ್ಕೂಟರ್‌ ವಿನ್ಯಾಸಗೊಳಿಸಿದೆ.
 ಜೊತೆ ಜೊತೆಗೆ 12 ಇಂಚಿನ ಅಲಾಯ್ ವೀಲ್ ಹಾಗೂ ಟ್ಯೂಬ್ ಲೆಸ್‌ ಟಯರ್‌ ಸ್ಕೂಟರಿನ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಎಂಜಿನ್‌ ಅಲ್ಟಿಮೇಟ್‌
ಮೊದಲೇ ಹೇಳಿದಂತೆ ಭಾರತೀಯ ಮಾರುಕಟ್ಟೆಯಲ್ಲಿನ 125 ಸಿಸಿ ಸಾಮರ್ಥ್ಯದ ಪ್ರೀಮಿಯಂ ಸ್ಕೂಟರ್‌ಗಳಿಗೆ ಸವಾಲೊಡ್ಡಲಿದೆ ಬರ್ಗಮನ್‌ಸ್ಟ್ರೀಟ್‌. ಆಕ್ಸೆಸ್‌ 125 ಸ್ಕೂಟರ್‌ಗೆ ಸರಿಸಮಾನ ಸಾಮರ್ಥ್ಯದ ಬರ್ಗಮನ್‌ ಸ್ಟ್ರೀಟ್‌ 8.6 ಬಿಎಚ್‌ಪಿ ಮತ್ತು 10.2 ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲದು. ಜತೆಗೆ ಸಿವಿಟಿ ಗೇರ್‌ಬಾಕ್ಸ್‌ ಹೊಂದಿದ್ದು, ಜಗ್ಗುವ ಶಕ್ತಿಹೊಂದಿದೆ.

ತಂತ್ರಜ್ಞಾನ ಬಳಕೆ ಅಚ್ಚುಮೆಚ್ಚು
 ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿಯೂ ಕಂಪನಿ ಹಿಂದೆಬಿದ್ದಿಲ್ಲ. ಡಿಜಿಟಲ್ ಮೀಟರ್‌ಗಳು, ಟೆಲಿ ಸ್ಕಾಪಿಕ್‌ಫೋರ್ಕ್‌, ಎಬಿಎಸ್‌ ಒಳಗೊಂಡ ಡಿಸ್ಕ್ ಬ್ರೇಕ್‌, ಮಲ್ಟಿ ಫ‌ಂಕ್ಷನ್‌ ಕೀ ಸ್ಲಾಟ್, 12ವ್ಯಾಟ್‌ ಚಾರ್ಜಿಂಗ್‌ ಪಾಯಿಂಟ್‌, ಎಲ್‌ಇಡಿ ಟೈಲ್ ಲ್ಯಾಂಪ್ ಅಳವಡಿಸಲಾಗಿದೆ.

ಭಿನ್ನ ಮಾದರಿ ಸ್ಕೂಟರ್‌
 150 ಸಿಸಿ ಸಾಮರ್ಥ್ಯದ ಇನ್‌ಟ್ರಾಡರ್‌ ಕ್ರೂಸರ್‌ ಬೈಕ್‌ ಪರಿಚಯಿಸಿರುವ ಸುಜುಕಿ ಅದೇ ಕ್ರೂಸರ್‌ ಸಾಮರ್ಥ್ಯವನ್ನು ಬರ್ಗಮನ್‌ ಸ್ಕೂಟರಿಗೂ ನೀಡಿದೆ. ಎಪ್ರಿಲಿಯಾ -125 ಮತ್ತು ವೆಸ್ಪಾ -150 ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ.

ಎಕ್ಸ್‌ ಶೋ ರೂಂ ಅಂದಾಜು ಬೆಲೆ
65,000 ರೂ. ನಿಂದ 70,000 ರೂ.

Related Articles

Leave a comment

Back to Top

© 2015 - 2017. All Rights Reserved.