ತೆರಿಗೆ ಸುಸ್ತಿದಾರರ ಹೆಸರು ಬಹಿರಂಗಪಡಿಸಿದ ಐಟಿ

BREAKING NEWS, National, News, Top News No Comments on ತೆರಿಗೆ ಸುಸ್ತಿದಾರರ ಹೆಸರು ಬಹಿರಂಗಪಡಿಸಿದ ಐಟಿ 16

ಹೊಸದಿಲ್ಲಿ: ಬರೋಬ್ಬರಿ 490 ಕೋಟಿ ರೂ. ತೆರಿಗೆ ಪಾವತಿಸದೇ ಇರುವ ಸುಸ್ತಿದಾರರ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆ ಪ್ರಕಟಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಿದೆ. ಅಷ್ಟೇ ಅಲ್ಲ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸುಳಿವು ನೀಡಿದೆ. 

ಗಮನಾರ್ಹ ಸಂಗತಿ ಏನೆಂದರೆ, ಸುಸ್ತಿದಾರರ ಪಟ್ಟಿಯಲ್ಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳೂ ಸೇರಿವೆ. ‘ಆದಾಯ ಮತ್ತು ಕಾರ್ಪೊರೇಟ್‌ ತೆರಿಗೆ ಸುಸ್ತಿದಾರರ ಪಟ್ಟಿ’ ಶೀರ್ಷಿಕೆಯಡಿಯಲ್ಲಿ ಕೆಲವು ರಾಷ್ಟ್ರೀಯ ದಿನಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಈ ಪಟ್ಟಿಯಲ್ಲಿನ ಮಾಹಿತಿ ಪ್ರಕಾರ ದಿಲ್ಲಿ ಮೂಲದ ಕಂಪನಿ ಅತಿ ಹೆಚ್ಚು, ಅಂದರೆ 86.27 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ.

Related Articles

Leave a comment

Back to Top

© 2015 - 2017. All Rights Reserved.