ಜಾನಿ ಜಾನಿ ಯೆಸ್ ಅಪ್ಪಾ, ಅಮ್ಮ-ಮಗಳ ಜೊತೇಲಿ ಸಿನೆಮಾ ನೋಡ್ರಪ್ಪಾ!

BREAKING NEWS, Entertainment No Comments on ಜಾನಿ ಜಾನಿ ಯೆಸ್ ಅಪ್ಪಾ, ಅಮ್ಮ-ಮಗಳ ಜೊತೇಲಿ ಸಿನೆಮಾ ನೋಡ್ರಪ್ಪಾ! 21

ಬೆಂಗಳೂರು: ಹೌದು, ಮನೆಮಂದಿಗೆ ಇಷ್ಟವಾಗೋ ಸ್ಟೈಲ್ ನ ಸಿನೆಮಾ ಇದಾಗಿರುವುದರಿಂದ ಕುಟುಂಬ ಸಮೇತ ಕೂತು ನೋಡುವ ವಿಶೇಷ ಪ್ರದರ್ಶನವೊಂದನ್ನು ಸಿನೆಮಾ ವೀಕ್ಷಿಸಿದ ಅಭಿಮಾನಿ ಬಳಗವೊಂದು ಅರೇಂಜ್ ಮಾಡಿದೆ. ಮೆಸೇಜ್ ಓರಿಯಂಟೆಡ್ ಸಿನೆಮಾ ಇದಾಗಿರುವುದರಿಂದ ‘ನಮ್ ಕನ್ನಡ ಸಿನ್ಮಾ ಸಪೋರ್ಟರ್ಸ್’ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದೆ…

ಏನಿದು ವಿಶೇಷ ಪ್ರದರ್ಶನ?!
ನಿಮ್ಮ ಮನೆಯಲ್ಲಿ ನೀವು, ನಿಮ್ಮ ವೈಫು ಹಾಗೂ ನಿಮಗೆ ಪಿಯುಸಿ ಆಸುಪಾಸಿನ ಹೆಣ್ಣುಮಗಳು ಇದ್ದರೆ ಈಗಲೇ 9538000044 ನಂಬರಿಗೆ ವಾಟ್ಸಪ್ ಮಾಡಿ…ಪೋಟೋ ಇಲ್ಲ ಎಂದರೆ ಸಿನೆಮಾಗೆ ಪ್ರವೇಶವಿಲ್ಲ. ದುನಿಯಾ ವಿಜಿ ಹಾಗೂ ಅವರ ಮಗಳ ಜೊತೆ ಸಿನೆಮಾ ನೋಡುವ ಅವಕಾಶ ಇಲ್ಲ! ಈಗಲೇ ಗಂಡ ಹೆಂಡತಿ ಮತ್ತು ಮೊನ್ನೆ ತಾನೇ ಪಿಯುಸಿ ಮುಗಿಸಿರುವ ಮಗಳು ಅಕ್ಕ ಪಕ್ಕ ನಿಂತು ಸೆಲ್ಫೀ ತೆಗೆದು 9538000044 ಗೆ ವಾಟ್ಸಪ್ ಮಾಡಿ… ಮೊದಲು ಯಾವ 50 ಫೋಟೋಗಳು ವಾಟ್ಸಪ್ ಗೆ ಬಂದು ಸೇರುತ್ತದೆಯೋ ಆ ಫ್ಯಾಮಿಲಿಗೆ (50*3=150ಸೀಟುಗಳು ಮಾತ್ರ) ಮನೆ ಮನ ಗೆದ್ದ, ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಜಾನಿ ಜಾನಿ ಯೆಸ್ ಪಪ್ಪಾ ಸಿನೆಮಾವನ್ನ ಚಿತ್ರತಂಡದ ಜೊತೆ ನೋಡುವ ಅದೃಷ್ಟ… ಆ ಅದೃಷ್ಟ ನಿಮ್ಮ ಫ್ಯಾಮಿಲಿಗೂ ಲಭಿಸಬಹುದು, ಯಾರಿಗೆ ಗೊತ್ತು?

ಈಗಲೇ ಗಂಡ ಹೆಂಡತಿ ಜೊತೆ ನಿಮ್ಮ ಪಿಯುಸಿ ಆಸುಪಾಸಿನ ಮಗಳ ಜೊತೆ ಒಂದು ಕ್ಲಿಕ್ ತೆಗೆದು ವಾಟ್ಸಪ್ ಮಾಡಿ. ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನೆಮಾ ನೋಡೋ ಅವಕಾಶ ಪಡೆಯಿರಿ.

ನೀವು ನಿಮ್ಮ ಮಗಳ ಹಾಗೂ ಹೆಂಡತಿಯ ಜೊತೆಗೇ ಬಂದು ಸಿನೆಮಾ ನೋಡಿ ಅಂತ ಪರ್ಟಿಕ್ಯುಲರ್ ಆಗಿ ಹೇಳಲು ಒಂದು ರೀಸನ್ ಇದೆ. ಅದು ಏನು ಎಂದು ಸಿನೆಮಾ ನೋಡಿದ ನಂತರ ಖುದ್ದು ದುನಿಯಾ ವಿಜಯ್ ಅವರೇ ವಿವರಿಸುತ್ತಾರೆ.

ಜಾನಿಜಾನಿ ಯೆಸ್ ಪಪ್ಪಾ… ಒಟ್ಗೇ ಕುಂತು ಸಿನ್ಮಾ ನೋಡೋಣ ಬನ್ನಿಪ್ಪಾ…

ವಿಶೇಷ ಸೂಚನೆ: ಮೇಲಿರೋ ನಂಬರ್ ಗೆ ವಾಟ್ಸಪ್ ಮಾತ್ರ ಮಾಡಿ, ಮೊದಲು ಕಳಿಸಿದವರಿಗೆ ಮೊದಲ ಆದ್ಯತೆ. ಹಾಗೇ ಈ ಶೋ ನೋಡಲು ಆಯ್ಕೆಯಾದ ಗಂಡ ಹೆಂಡತಿ ಮಾತ್ರ ಟಿಕೆಟ್ ಖರೀದಿ ಮಾಡಿದ್ರೆ ಸಾಕು, ನಿಮ್ಮ ಮಗಳಿಗೆ ಟಿಕೆಟ್ ಉಚಿತ.

Related Articles

Leave a comment

Back to Top

© 2015 - 2017. All Rights Reserved.