ಮಾಜಿ ಕಾರ್ಪೋರೇಟರ್ ಗೆ ಪರಿಹಾರ ನೀಡುವಂತೆ ಮೈಸೂರಿನ ‘ಕೈ’ ಶಾಸಕ ಎಂ.ಕೆ ಸೋಮಶೇಖರ್ ಗೆ ಕೋರ್ಟ್ ಆದೇಶ…

BREAKING NEWS, Crime No Comments on ಮಾಜಿ ಕಾರ್ಪೋರೇಟರ್ ಗೆ ಪರಿಹಾರ ನೀಡುವಂತೆ ಮೈಸೂರಿನ ‘ಕೈ’ ಶಾಸಕ ಎಂ.ಕೆ ಸೋಮಶೇಖರ್ ಗೆ ಕೋರ್ಟ್ ಆದೇಶ… 9
ಮೈಸೂರು: ಮೈಸೂರಿನ ಬಿಜೆಪಿ ಮುಖಂಡ, ಮಾಜಿ ಕಾರ್ಪೊರಟರ್ ಎಂ.ಸಿ.ಚಿಕ್ಕಣ್ಣ ಅವರು ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯ ತೀರ್ಪು ಪ್ರಕಟಿಸಿದ ಮೈಸೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ರೂ.51,000 ಪರಿಹಾರ ನೀಡುವಂತೆ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ಆದೇಶಿಸಿದೆ.Mysore court -orders -MK Somashekhar – pay- compensation -Rs 51,000
ಪ್ರಕರಣದ ವಿವರ: 
ಶಾಸಕ ಎಂ.ಕೆ.ಸೋಮಶೇಖರ್ ಅವರು ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನೆಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆಯ ಗ್ಯಾಸ್ ಏಜನ್ಸಿ ಡೀಲರ್ ಶಿಪ್ ಪಡೆದಿದ್ದಾರೆಂದು 2008ರ ಸೆಪ್ಟೆಂಬರ್ ಸಮಯದಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದರು. ತಾನು ನಿರೋದ್ಯೋಗಿ ಪದವೀಧರರ ಕೋಟಾದಿಂದ ತಾನು ಗ್ಯಾಸ್ ಏಜನ್ಸಿ ಪಡೆದಿರುವುದಾಗಿ ಸೋಮಶೇಖರ್ ಅವರು ಸಾಧಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚಿಕ್ಕಣ್ಣ ಅವರು ಎಂ.ಕೆ.ಸೋಮಶೇಖರ್ ಅವರು ಸಿ ಎಫ್ ಟಿ ಆರ್ ಐ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದುದರಿಂದ ಅವರು ನಿರುದ್ಯೋಗಿ ಪದವೀಧರ ಕೋಟಾದಡಿಯಲ್ಲಿ ಗ್ಯಾಸ್ ಏಜನ್ಸಿ ಪಡೆದಿದ್ದಾರೆ ಎಂಬ ಅಂಶವೂ ಸುಳ್ಳು ಎಂದು ಹೇಳಿಕೆ ನೀಡಿದ್ದರು.Mysore court -orders -MK Somashekhar – pay- compensation -Rs 51,000
ಈ ವಿಚಾರವಾಗಿ ಸೋಮಶೇಖರ್ ಅವರು ಚಿಕ್ಕಣ್ಣ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಕೆ ಆರ್ ಠಾಣೆಯ ಪೊಲೀಸರು ಸೋಮಶೇಖರ್ ಅವರು ನೀಡಿದ್ದ ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಕ್ಕಾಗಿ ಎಂ.ಕೆ.ಸೋಮಶೇಖರ್ ಅವರು 9.9.2008ರಂದು ಪತ್ರಿಕಾ ಹೇಳಿಕೆ ನೀಡಿ “ತಾನು ಗ್ಯಾಸ್ ಏಜನ್ಸಿ ಪಡೆದಿರುವುದು ನಿರುದ್ಯೋಗಿ ಪದವೀಧರ ಖೋಟಾದಿಂದೇ ಹೊರತು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಅಲ್ಲ. ಈ ವಿಚಾರವಾಗಿ15 ಲಕ್ಷ ರೂಪಾಯಿ ನೀಡಿದರೆ ತಾನು ಸುಮ್ಮನಿರುವುದಾಗಿ ಚಿಕ್ಕಣ್ಣ ಹೇಳಿದ್ದರು. ನಾನು ಹಣ ನೀಡುವುದಿಲ್ಲ ಎಂದಿದ್ದಕ್ಕೆ ಎಸ್.ಎ.ರಾಮದಾಸ್ ಅವರಿಂದ ಹಣ ಪಡೆದು ಈ ರೀತಿ ಬ್ಲಾಕ್ ಮೇಲ್ ರಾಜಕೀಯ ಮಾಡುತ್ತಿದ್ದಾರೆ, ಚಿಕ್ಕಣ್ಣನವರು ನಗರ ಪಾಲಿಕೆಯಲ್ಲಿ ಜೀವನದುದ್ದಕ್ಕೂ ರೋಲ್ ಕಾಲ್ ಮಾಡುತ್ತಿದ್ದುದರಿಂದ ಈವರೆಗೂ ಮೇಯರ್ ಆಗಿಲ್ಲ” ಎಂದು ಚಿಕ್ಕಣ್ಣ ಅವರ ವಿರುದ್ಧ ಆರೋಪಿಸಿದ್ದರು. ಈ ವಿಷಯವು 10.09.2008ರ ದಿನಪತ್ರಿಕೆಗಳಲ್ಲಿ “ಹಣಕ್ಕಾಗಿ ಚಿಕ್ಕಣ್ಣ ಬ್ಲಾಕ್ ಮೇಲ್ ರಾಜಕೀಯ” ಎಂಬ ಶೀರ್ಷಿಕೆಯಲ್ಲಿ ಸುದ್ದಿಯಾಗಿ ಪ್ರಕಟವಾಗಿತ್ತು.
ಇದರಿಂದ ಮನನೊಂದ ಎಂ.ಸಿ.ಚಿಕ್ಕಣ್ಣ ಅವರು ಸೋಮಶೇಖರ್ ಅವರಿಗೆ ವಕೀಲರ ಮುಖಾಂತರ ನೋಟೀಸು ನೀಡಿ ತನಗುಂಟಾದ ಮಾನಹಾನಿಗೆ ಮೂರು ದಿನದೊಳಗೆ ಕ್ಷಮೆ ಯಾಚಿಸಿ ಪತ್ರಿಕಾ ಪ್ರಕಟಣೆ ನೀಡುವುದರ ಜೊತೆಗೆ ತನಗಾದ ಮಾನಹಾನಿಗೆ ನಷ್ಟ ಪರಿಹಾರಾರ್ಥವಾಗಿ ಹತ್ತು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದೂ ಸೂಚಿದ್ದರು. 
ಈ ವಿಚಾರವಾಗಿ ಎಂ.ಕೆ.ಸೋಮಶೇಖರ್ ಅವರು ಪ್ರತಿಕ್ರಿಯೆ ನೀಡದ ಕಾರಣ ಎಂ.ಸಿ.ಚಿಕ್ಕಣ್ಣ ಅವರು ಎಂ.ಕೆ.ಸೋಮಶೇಖರ್ ವಿರುದ್ಧ ರೂ.51,000 ನಷ್ಟ ಪರಿಹಾರ ಕೋರಿ ಮೈಸೂರಿನ ಒಂದನೇ ಹೆಚ್ಚುವರಿ ಪ್ರಥಮ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಶ್ರೀ ಎಂ.ಎಸ್.ಆಳ್ವ ಅವರು ಮೊಕದ್ದಮೆಯನ್ನು ವಜಾಗೊಳಿಸಿ ತೀರ್ಪು ನೀಡಿದ್ದರು.
ಆ ತೀರ್ಪನ್ನು ಪ್ರಶ್ನಿಸಿ ಎಂ.ಸಿ.ಚಿಕ್ಕಣ್ಣ ಅವರು ಮೈಸೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ ಜೆ ಎಂ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಸದರಿ ಮೇಲ್ಮನವಿಯು ಮೈಸೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.
ಮೇಲ್ಮನವಿಯ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀ ಸುಧೀಂದ್ರನಾಥ್.ಎಸ್ ಅವರು ಮೇಲ್ಮನವಿಯನ್ನು ಪುರಸ್ಕರಿಸಿ ತೀರ್ಪು ನೀಡಿ ಸೋಮಶೇಖರ್ ಅವರು ನೀಡಿದ್ದ ಮಾನಹಾನಿ ಹೇಳಿಕೆಯಿಂದ ಚಿಕ್ಕಣ್ಣ ಅವರಿಗೆ ಮಾನಹಾನಿ ಆಗಿರುವುದರಿಂದ ಸೋಮಶೇಖರ್ ಅವರು ರೂ.51,000 ವನ್ನು 6% ಬಡ್ಡಿಯೊಂದಿಗೆ ನಷ್ಟ ಪರಿಹಾರದ ರೂಪದಲ್ಲಿ ಪ್ರಕರಣದ ಖರ್ಚು-ವೆಚ್ಚ ಸಹಿತವಾಗಿ ಚಿಕ್ಕಣ್ಣ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.
ಎಂ.ಸಿ.ಚಿಕ್ಕಣ್ಣ ಅವರ ಪರವಾಗಿ ವಕೀಲರಾದ ಸಿ.ವಿ.ಕೇಶವಮೂರ್ತಿ ಅವರು ವಕಾಲತ್ ವಹಿಸಿ ವಾದಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.