ಕ್ರಿಕೆಟ್: ವಿಂಡೀಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಪಾಕ್ !

BREAKING NEWS, Sports No Comments on ಕ್ರಿಕೆಟ್: ವಿಂಡೀಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಪಾಕ್ ! 15
ಕರಾಚಿ: ಕರಾಚಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ಗಳ ಜಯ ಗಳಿಸಿದ್ದು, 3-0 ಅಂತರದಿಂದ ಸರಣಿ ವೈಟ್ ವಾಷ್ ಮಾಡಿದೆ.
ಕಳೆದ 2 ಪಂದ್ಯಗಳಿಗಿಂತ ಈ ಬಾರಿಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 6 ವಿಕೆಟ್ ಗಳ ನಷ್ಟಕ್ಕೆ ನಿಗದಿತ 20 ಓವರ್ ಗಳಲ್ಲಿ 153 ರನ್ ಗಳಿಸಿತ್ತು.
ಎದುರಾಳಿ ತಂಡ ನೀಡಿದ್ದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 16.5 ಓವರ್ ಗಳಲ್ಲಿ ಗುರಿ ತಲುಪಿದ್ದು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಗಳ ಜಯ ದಾಖಲಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಪಾಕ್ ಪರ ತಲಾತ್ 31 ರನ್ ಗಳಿಸಿ ಔಟಾದರೆ ಆಸೀಫ್ ಅಲಿ 25 ರನ್ ಗಳಿಸಿ ಅಜೇಯರಾಗಿ ಉಳಿದರು ಫಖರ್ ಝಮನ್ 40 ರನ್ ಗಳಿಸಿದರು.

Related Articles

Leave a comment

Back to Top

© 2015 - 2017. All Rights Reserved.