ಕಾಮನ್ ವೆಲ್ತ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ : ವೈಟ್ ಲಿಫ್ಟಿಂಗ್’ನಲ್ಲಿ ಸ್ವರ್ಣ ಗೆದ್ದ ಸಂಚಿತಾ

BREAKING NEWS, Sports No Comments on ಕಾಮನ್ ವೆಲ್ತ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ : ವೈಟ್ ಲಿಫ್ಟಿಂಗ್’ನಲ್ಲಿ ಸ್ವರ್ಣ ಗೆದ್ದ ಸಂಚಿತಾ 30
ಗೋಲ್ಡ್‌’ಕೋಸ್ಟ್‌ : ಕಾಮನ್ ವೆಲ್ತ್ ಗೇಮ್ಸ್’ನಲ್ಲಿ ಭಾರತ ಮತ್ತೊಂದು ಚಿನ್ನವನ್ನ ಗಳಿಸಿದೆ. ವೇಟ್‌ ಲಿಫ್ಟರ್‌ ಸಂಜಿತಾ ಚಾನು ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗಳಿಸಿಕೊಟ್ಟಿದ್ದಾರೆ.
2018ನೇ ಸಾಲಿನ ಕಾಮನ್‌’ವೆಲ್ತ್‌ ಗೇಮ್ಸ್‌’ನಲ್ಲಿ ಎರಡನೇ ದಿನ ಮಹಿಳೆಯರ 53 ಕೆಜಿ ತೂಕದ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಜಿತಾ ಚಾನು, ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.
ಈ ಹಿಂದಿನ ಕಾಮನ್‌’ವೆಲ್ತ್‌ ಕ್ರೀಡಾಕೂಟದ ದಾಖಲೆಯನ್ನು ಮುರಿದಿರುವ ಸಂಜಿತಾ ಮೊದಲನೆ ವಿಭಾಗದಲ್ಲಿ 84 ಕೆಜಿ ಹಾಗೂ 108 ಕೆಜಿ ತೂಕವನ್ನು ಎತ್ತುವ ಮೂಲಕ ಒಟ್ಟು 192 ಕೆಜಿ ವೇಟ್‌ ಲಿಫ್ಟ್‌ ಮಾಡಿ ಚಿನ್ನದ ಪದಕ ಗಳಿಸಿದ್ದಾರೆ.
2014ರಲ್ಲಿ ಗ್ಲಾಸ್ಕೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್‌ನಲ್ಲಿಯೂ ಸಂಚಿತಾ ಚಾನು ಚಿನ್ನದ ಪದಕವನ್ನು ಗಳಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.