ತನ್ನದೇ ಪತ್ನಿಯ ಬೆತ್ತಲೆ ಫೋಟೋಗಳನ್ನು ಸ್ನೇಹಿತನಿಗೆ ಕಳುಹಿಸಿದ್ದ ನೀಚ ಪತಿ!

BREAKING NEWS, Crime No Comments on ತನ್ನದೇ ಪತ್ನಿಯ ಬೆತ್ತಲೆ ಫೋಟೋಗಳನ್ನು ಸ್ನೇಹಿತನಿಗೆ ಕಳುಹಿಸಿದ್ದ ನೀಚ ಪತಿ! 17
ಚಂಡೀಗಢ: ಪತಿಯೇ ತನ್ನ ಪತ್ನಿಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಆಘಾತಕಾರಿ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ನಡೆದಿದೆ.
ಪಂಚಕುಲದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಿದ್ದನು. ಮದುವೆಯಾದ ನಂತರ ಪತ್ನಿಗೆ ಮತಾಂತರಕ್ಕೆ ಬಲವಂತ ಮಾಡುತ್ತಿದ್ದನು. ಇದೇ ವಿಚಾರಕ್ಕೆ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ಸಂತ್ರಸ್ತೆ ಮತಾಂತರಕ್ಕೆ ಒಪ್ಪದ ಕಾರಣ ತಲಾಖ್ ನೀಡುವುದಾಗಿ ಬೆದರಿಕೆ ಕೂಡ ಹಾಕಿದ್ದನು ಎನ್ನಲಾಗಿದೆ.
ಪತಿ ಎಷ್ಟೆ ಹೇಳಿದರೂ ಸಂತ್ರಸ್ತೆ ಮತಾಂತರಕ್ಕೆ ಒಪ್ಪಲಿಲ್ಲ. ಕೊನೆಗೆ ಆರೋಪಿ ಪತಿ ತನ್ನ ಪತ್ನಿಯ ನಗ್ನ ಫೋಟೋಗಳನ್ನು ಮೊದಲು ಸ್ನೇಹಿತರಿಗೆ ಕಳಿಸಿದ್ದಾನೆ. ನಂತರ ಸ್ನೇಹಿತನ ಜೊತೆ ಸೇರಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ. ಇದೀಗ ಆ ಫೋಟೋಗಳು ವೈರಲ್ ಆಗಿದ್ದು, ಇದರಿಂದಾಗಿ ಕಂಗಾಲಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಮದುವೆಯಾಗಿ ಎಷ್ಟು ಸಮಯಗಳಾಗಿವೆ ಎಂಬುದು ತಿಳಿದು ಬಂದಿಲ್ಲ. ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.