ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

Entertainment No Comments on ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್! 39
ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ರಾಧಿಕಾ ಒಂದು ವಸ್ತುವನ್ನ ಕದ್ದು ತಂದಿದ್ದಾರೆ. ಈ ಬಗ್ಗೆ ಖುದ್ದು ರಾಧಿಕಾ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
ಯಶ್ ಅವರನ್ನು ಭೇಟಿ ಮಾಡಲು ರಾಧಿಕಾ `ಕೆಜಿಎಫ್ ಸೆಟ್’ ಗೆ ಹೋಗಿದ್ದರು. ಅಲ್ಲಿಂದ ಸ್ಪೆಷಲ್ ಆಗಿ ಕಣ್ಣಿಗೆ ಕಂಡ ಒಂದು ವಸ್ತುವನ್ನು ತೆಗೆದುಕೊಂಡು ಬಂದಿದ್ದಾರೆ. ರಾಧಿಕಾ ಕೆಜಿಎಫ್ ಸೆಟ್ ನಲ್ಲಿದ್ದ ಹಳದಿ ಬಣ್ಣ ಸನ್ ಗ್ಲಾಸ್ ಅನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಬಂದಿದ್ದಾರೆ. ನಂತರ ಅದನ್ನು ಹಾಕಿಕೊಂಡು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಆ ಫೋಟೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಯಾರಿಗೂ ತಿಳಿಯದಂತೆ ತಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದಾರೆ. ಫೋಟೋ ನೋಡಿರುವ ಅಭಿಮಾನಿಗಳು ರಾಧಿಕಾ ಅವರ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಕಮೆಂಟ್ ಮೂಲಕ ತಿಳಿಸಿದ್ದಾರೆ.
ಕೆಲವರು ಈ ಫೋಟೋಗೆ ಲೈಕ್ ಕೊಟ್ಟು ಕೆಜಿಎಫ್ ಸಿನಿಮಾ ಬಗ್ಗೆ ಚರ್ಚೆ ಶುರು ಮಾಡಿದ್ದು, ಕೆಜಿಎಫ್ ಸೆಟ್ ಗೆ ಹೋದಾಗ ನೀವಾದರೂ ನಿರ್ದೇಶಕರಿಗೆ ಹೇಳಿ ಬೇಗ ಸಿನಿಮಾ ಬಿಡುಗಡೆ ಮಾಡಿಸಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಅದರ ಜೊತೆಯಲ್ಲಿ ಯಶ್ ಅಣ್ಣನಿಗೂ ಚಿತ್ರ ರಿಲೀಸ್ ಮಾಡಿಸುವಂತೆ ತಿಳಿಸಿ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.