ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100 ಕೆ.ಜಿ ಚಿನ್ನಾಭರಣ ವಶ- 34 ಮಂದಿ ಆರೋಪಿಗಳ ಬಂಧನ

BREAKING NEWS, Crime No Comments on ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100 ಕೆ.ಜಿ ಚಿನ್ನಾಭರಣ ವಶ- 34 ಮಂದಿ ಆರೋಪಿಗಳ ಬಂಧನ 22
ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 34 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
2017-18 ಸಾಲಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲೆತ್ನಿಸಿದ 100 ಕೆ.ಜಿ. ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30 ಕೋಟಿಗೂ ರೂ. ಅಧಿಕವಾಗಿದೆ.
ಅಕ್ರಮವಾಗಿ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿರುವ 34 ಜನ ಆರೋಪಿಗಳನ್ನ ಅಧಿಕಾರಿಗಳು ಬಂಧಿಸಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಧ್ಯ ಏಷ್ಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಜೋರ್ಡಾನ್, ಶ್ರೀಲಂಕಾ ಮತ್ತು ದಕ್ಷಿಣಾ ಏಷ್ಯಾದ ಅಕ್ರಮ ಸ್ಮಗ್ಲರ್ಸ್ ಇದೀಗ ಕಂಬಿ ಎಣಿಸುತ್ತಿದ್ದಾರೆ.
ಬಟ್ಟೆ, ಕೊರಿಯರ್, ಬೆಲ್ಟ್ ಬಕಲ್, ಚಪ್ಪಲಿ, ಚಾಕಲೇಟ್, ಸೋಪ್, ಒಳ ಉಡುಪು, ಮಣ್ಣು ಮಿಶ್ರಿತ ಪುಡಿ ಹೀಗೆ ವಿವಿಧ ರೂಪಗಳಲ್ಲಿ ವಿಮಾನ ನಿಲ್ದಾಣದ ಮೂಲಕ ಸ್ಮಗ್ಲಿಂಗ್ ನಡೆಸುವ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
2016-17 ಸಾಲಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು 34 ಕೆ.ಜಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದರು. ಇದರ ಮಾರುಕಟ್ಟೆ ಮೌಲ್ಯ 9.97 ಕೋಟಿ ರೂ. ಕಳೆದ ಸಾಲಿಗೆ ಹೋಲಿಸಿಕೊಂಡರೆ ಪ್ರಸಕ್ತ ಸಾಲಿನಲ್ಲಿ ಶೇ 200 ರಷ್ಟು ಅಕ್ರಮ ಸಾಗಾಟ ಪ್ರಕರಣ ಹೆಚ್ಚಾಗಿವೆ ಎಂದು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.