ಡೇವಿಸ್‌ ಕಪ್‌ ಡಬಲ್ಸ್‌ ಅತೀ ಹೆಚ್ಚು ಗೆಲವು: ಪೇಸ್‌ ವಿಶ್ವ ದಾಖಲೆ

BREAKING NEWS, Featured, Sports No Comments on ಡೇವಿಸ್‌ ಕಪ್‌ ಡಬಲ್ಸ್‌ ಅತೀ ಹೆಚ್ಚು ಗೆಲವು: ಪೇಸ್‌ ವಿಶ್ವ ದಾಖಲೆ 16
ತಿಯಾಂಜಿನ್‌ : ಭಾರತದ ಹಿರಿಯ ಟೆನಿಸ್‌ ಪಟು ಲಿಯಾಂಡರ್‌ ಪೇಸ್‌ ಅವರು ಇಂದು ಶನಿವಾರ ಡೇವಿಸ್‌ ಕಪ್‌ ಇತಿಹಾಸದಲ್ಲೇ ಅತೀ ಹೆಚ್ಚು ಡಬಲ್ಸ್‌ ಪಂದ್ಯಗಳನ್ನು ಜಯಿಸಿದ ವಿಶ್ವ ದಾಖಲೆಯನ್ನು ಮಾಡಿದರು.
ಪೇಸ್‌ ಅವರು ರೋಹನ್‌ ಬೊಪಣ್ಣ ಅವರ ಜತೆಗೂಡಿ 43ನೇ ಡಬಲ್ಸ್‌ ವಿಜಯವನ್ನು ದಾಖಲಿಸಿದರಲ್ಲದೆ ಆ ಮೂಲಕ ಚೀನದೊಂದಿಗಿನ ಸೆಣಸಾಟಕ್ಕೆ ಮತ್ತೆ ಭಾರತವನ್ನು ತಂದು ನಿಲ್ಲಿಸಿದರು.
ಎಐಟಿಎ ಬಲವಂತದಿಂದ ಬೋಪಣ್ಣ ಜತೆಗೂಡಿ ಆಟವಾಡಿದ 44ರ ಹರೆಯದ ಪೇಸ್‌ ಅವರು ಚೀನದ ಜೋಡಿ ಮೋ ಕ್ಸಿನ್‌ ಗಾಂಗ್‌ ಮತ್ತು ಝಿ ಝಾಂಗ್‌ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 5-7, 7-6(5), 7-6(3) ಅಂತರದಲ್ಲಿ ವಿಜಯಗಳಿಸುವಲ್ಲಿ ಮುಖ್ಯ ಪಾತ್ರವಹಿಸಿದರು. ಆ ಮೂಲಕ ಏಶ್ಯ/ಒಸಾನಿಯಾ ಗ್ರೂಪ್‌ 1 ಟೈಯಲ್ಲಿ ಡಬಲ್ಸ್‌ ರಬ್ಬರ್‌ ಸಂಪಾದಿಸಿದರು. 
ನಿನ್ನೆ ಶುಕ್ರವಾರ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಸುಮಿತ್‌ ನಗಾಲ್‌ ಜೋಡಿಗೆ ಅಚ್ಚರಿಯ ಸೋಲು ಉಂಟಾಗಿದ್ದರಿಂದ ಭಾರತವನ್ನು ಈ ಸರಣಿಯಲ್ಲಿ ಸ್ಪರ್ಧೆಯಲ್ಲಿ ಇರಿಸಲು ಡಬಲ್ಸ್‌ ಜಯಿಸುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಆ ಅಗತ್ಯವನ್ನು ಪೇಸ್‌ – ಬೋಪಣ್ಣ ಜೋಡಿ ಸಮರ್ಥವಾಗಿ ನಿಭಾಯಿಸಿತು. 
ಭಾರತದ ಯುವಕರು ಈಗಿನ್ನು ವಿಶ್ವ ಕಪ್‌ ಪ್ಲೇ ಆಫ್ ಹಂತಕ್ಕೇರಲು  ರಿವರ್ಸ್‌ ಸಿಂಗಲ್ಸ್‌ನಲ್ಲಿ ತಮ್ಮ ಯಶಸ್ವೀ ಹೋರಾಟವನ್ನು ಸಾದರಪಡಿಸಬೇಕಾಗುತ್ತದೆ.  

Related Articles

Leave a comment

Back to Top

© 2015 - 2017. All Rights Reserved.