ಗಮನಿಸಿ, ಹೊಸ ಏರ್ ಪೋರ್ಟ್ ರಸ್ತೆಯಲ್ಲಿ ಹೋಗೋರೆ ಹುಷಾರ್..!

BREAKING NEWS, News, Regional No Comments on ಗಮನಿಸಿ, ಹೊಸ ಏರ್ ಪೋರ್ಟ್ ರಸ್ತೆಯಲ್ಲಿ ಹೋಗೋರೆ ಹುಷಾರ್..! 6
ಬೆಂಗಳೂರು: ಏರ್ ಪೋರ್ಟ್ ಹೋಗಬೇಕು ಅಂದರೆ ಸಾಕಷ್ಟು ಟೋಲ್ ಕಟ್ಟಬೇಕು. ಟೋಲ್ ಬಿಟ್ಟು ಹೋಗೋಕೆ ಬೇರೆ ದಾರಿ ಇಲ್ಲ ಅಂತ ಇದ್ದವರಿಗೆ ಸರ್ಕಾರ ಹೊಸದೊಂದು ರೋಡ್ ಮಾಡಿಕೊಟ್ಟಿತ್ತು. ಆದ್ರೆ ಈಗ ಆ ರೋಡ್‍ನಲ್ಲಿ ಯಾರೂ ಸಂಚಾರ ಮಾಡುವ ಹಾಗಿಲ್ಲ. ಯಾಕಂದ್ರೆ ಈ ರಸ್ತೆಯಲ್ಲಿ ಸಂಚರಿಸಿದ್ರೆ ಊರಿನ ಜನ ಹಿಗ್ಗಾಮುಗ್ಗವಾಗಿ ಥಳಿಸುತ್ತಾರೆ.
ಬೇರೆ ಊರಿಗೆ ಹೋಗೋಕೆ ಏರ್ ಪೋರ್ಟ್ ಹೋಗುತ್ತಿದ್ದ ಜನಕ್ಕೆ ದಿನನಿತ್ಯ ಟೋಲ್‍ನ ಕಿರಿಕಿರಿ ಇತ್ತು. ಅದರಲ್ಲೂ ಕ್ಯಾಬ್‍ನ ಡ್ರೈವರ್ ಗಳು ಸರ್ಕಾರಕ್ಕೆ ಪದೇ ಪದೇ ಮನವಿ ನೀಡುತ್ತಿದ್ದರು. ಹೀಗಾಗಿ ಸರ್ಕಾರ ಏರ್ ಪೋರ್ಟ್ ರಸ್ತೆಯ ಟೋಲ್ ಕಿರಿಕಿರಿ ತಪ್ಪಿಸಲು ಕೋಟಿ ಕೋಟಿ ಹಣ ಖರ್ಚು ಮಾಡಿ ಪರ್ಯಾಯ ಮಾರ್ಗ ಕಲ್ಪಿಸಿದೆ.
ಆದ್ರೆ ಈ ರಸ್ತೆಯಲ್ಲೂ ಪ್ರಯಾಣಿಕರಿಗೆ ನೆಮ್ಮದಿಯಿಲ್ಲ. ಏರ್ ಪೋರ್ಟ್ ಗೆ ಹೋಗುವ ರಸ್ತೆ ಮಾರ್ಗದಲ್ಲಿ ಹಲವು ಹಳ್ಳಿಗಳು ಸಿಗುತ್ತದೆ. ಇಲ್ಲಿ ಕ್ಯಾಬ್ ಚಾಲಕರು ವೇಗವಾಗಿ ವಾಹನ ಚಲಾಯಿಸಿ ಜನರ ಪ್ರಾಣಕ್ಕೆ ಕುತ್ತು ತರುತ್ತಾ ಇದ್ದಾರಂತೆ. ಹೀಗಾಗಿ ಹಳ್ಳಿಯ ಒಳಗೆ ಕಾರ್ ಗಳನ್ನು ತೆಗೆದುಕೊಂಡು ಹೋಗಲು ಇಲ್ಲಿನ ಜನ ಬಿಡ್ತಾ ಇಲ್ಲ. ಅಪ್ಪಿ-ತಪ್ಪಿ ಬಂದರೆ ಅವರನ್ನ ಹೊಡೆದು ಕಳುಹಿಸುತ್ತಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ ಎಂದು ಕ್ಯಾಬ್ ಚಾಲಕ ಹರೀಶ್ ಹೇಳಿದ್ದಾರೆ.
ಜನರು ರೊಚ್ಚಿಗೆದ್ದು ಈ ರೀತಿ ಹಲ್ಲೆ ಮಾಡುತ್ತಾ ಇರುವುದರಿಂದ ಸಾಕಷ್ಟು ಕ್ಯಾಬ್‍ಗಳು ಮತ್ತೆ ಅದೇ ಟೋಲ್ ರಸ್ತೆಯಲ್ಲೇ ಪ್ರಯಾಣಿಸ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ಓಡಾಡೋರಿಗೆ ಹಲ್ಲೆ ಮಾಡಿದರೆ ಮತ್ತೆ ಟೋಲ್ ರಸ್ತೆಗೆ ಇಳೀತಾರೆ. ಹೀಗಾಗಿ ಟೋಲ್ ಮ್ಯಾನೇಜ್ ಮೆಂಟ್‍ನವರೇ ಪೊಲೀಸರಿಗೆ ಮತ್ತು ಜನರಿಗೆ ಹಣಕೊಟ್ಟು ಹೀಗೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಕ್ಯಾಬ್ ಚಾಲಕ ನವೀನ್‍ಗೌಡ ಆರೋಪಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.