ಜನಸಂದಣಿಯಿದ್ದ ಕಡೆ ಏಕಾಏಕಿ ನುಗ್ಗಿದ ಕಾರ್- ನಾಲ್ವರ ದುರ್ಮರಣ, 20ಕ್ಕೂ ಅಧಿಕ ಮಂದಿ ಗಂಭೀರ

BREAKING NEWS, International, News No Comments on ಜನಸಂದಣಿಯಿದ್ದ ಕಡೆ ಏಕಾಏಕಿ ನುಗ್ಗಿದ ಕಾರ್- ನಾಲ್ವರ ದುರ್ಮರಣ, 20ಕ್ಕೂ ಅಧಿಕ ಮಂದಿ ಗಂಭೀರ 53
ಬರ್ಲಿನ್: ಜನಸಂದಣಿ ಇದ್ದ ಕಡೆ ಕಾರೊಂದು ನುಗ್ಗಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ ಜರ್ಮನಿಯ ಮುನ್‍ಸ್ಟರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಕಾರು ಚಾಲಕ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ನಗರದ ಐತಿಹಾಸಿಕ ಕೀಪೆನ್‍ಕೆರಿ ಪ್ರದೇಶದಲ್ಲಿರೋ ಪಬ್ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದ ಜನರ ಮೇಲೆ ಏಕಾಏಕಿ ಕಾರು ಬಂದು ಹರಿದಿದೆ. ತಕ್ಷಣಕ್ಕೆ ಏನಾಯಿತೆಂದು ಮಾಹಿತಿ ನೀಡಲು ಪೊಲೀಸಲು ನಿರಾಕರಿಸಿದ್ದು, ಘಟನೆ ಬಗ್ಗೆ ವದಂತಿ ಹರಡದಂತೆ ಜನತೆಗೆ ಸೂಚಿಸಿದ್ದಾರೆ.
ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದ ಕಾರಣ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 20 ಮಂದಿಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ 6 ಮಂದಿಗೆ ಗಂಭೀರವಾಗಿ ಗಾಯಗಳಾಗಿವೆ. ಆದರೆ ಅಪಘಾತ ನಡೆಸಿದ ಬಳಿಕ ಕಾರ್ ಚಾಲಕ ಸ್ವತಃ ತಾನೇ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದನೆಂದು ಸ್ಥಳೀಯ ಪೋಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತ ಮಾಹಿತಿ ತಿಳಿದ ತಕ್ಷಣ ಭಾರೀ ಸಂಖ್ಯೆಯ ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಹಲವಾರು ಪೊಲೀಸ್ ಮತ್ತು ಅಗ್ನಿಶಾಮಕ ವಾಹನಗಳು ಗುಂಪು ಸೇರಿರುವ ಚಿತ್ರಗಳು ಸ್ಥಳೀಯ ದೂರದರ್ಶನದಲ್ಲಿ ಪ್ರಸಾರವಾಗಿದೆ. ಶಸ್ತ್ರಸಜ್ಜಿತ ಪೋಲಿಸರು ಸ್ಥಳವನ್ನು ಸುತ್ತುವರಿದಿದ್ದು ತನಿಖೆಗೆ ಅನುಕೂಲವಾಗಲು ನಗರದ ಕೇಂದ್ರದಿಂದ ದೂರ ತೆರಳುವಂತೆ ಸ್ಥಳೀಯರನ್ನು ಮನವಿ ಮಾಡಿದ್ದಾರೆ.
ಇದೊಂದು ಭಯೋತ್ಪಾದಕ ದಾಳಿಯೇ ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಸ್ಥಳದಲ್ಲಿನ ಸನ್ನಿವೇಶ ಗಮನಿಸಿದರೆ ಭಯೋತ್ಪಾದಕ ದಾಳಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಭದ್ರತಾ ಮೂಲಗಳು ಹೇಳಿವೆ. 2016ರ ಡಿಸೆಂಬರ್ ನಲ್ಲಿ ಬರ್ಲಿನ್‍ ನಲ್ಲಿ ನಡೆದ ಟ್ರಕ್ ಬಾಂಬ್ ದಾಳಿಯನ್ನು ಈ ಘಟನೆ ನೆನಪಿಸುವಂತಿದೆ.

Related Articles

Leave a comment

Back to Top

© 2015 - 2017. All Rights Reserved.