ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ- ಯಶ್!

BREAKING NEWS, Entertainment No Comments on ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ- ಯಶ್! 23
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ಹಿಂದೆ ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ’ ಎಂದು ಕೆಜಿಎಫ್ ಡೈಲಾಗ್ ಹೊಡೆದಿದ್ದರು.
ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಡೈಲಾಗ್ ಮತ್ತೆ ಹವಾ ಕ್ರಿಯೆಟ್ ಮಾಡೋಕೆ ರೆಡಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ `ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ’ ಎಂದು ಯಶ್ ಕೆಜಿಎಫ್ ಸಿನಿಮಾದ ಡೈಲಾಗ್ ಸ್ಯಾಂಪಲ್ ಕೊಟ್ಟಿದ್ದರು.
ಈ ಡೈಲಾಗ್ ಕೇಳಿದ ರಾಕಿಂಗ್ ಅಭಿಮಾನಿಗಳು ಕೆಜಿಎಫ್ ಬರಿ ರೌಡಿಸಂ ಕಥೆಯಲ್ಲ ಇದರಲ್ಲಿ ಲವ್ ಸ್ಟೋರಿ ಕೂಡ ಇದೇ ಎಂದು ಥ್ರಿಲ್ ಆಗಿದ್ದರು. ಇದರ ಜೊತೆ ರಿವೀಲ್ ಆದ ಕೆಜಿಎಫ್ ಸಿನಿಮಾದ ಮೇಕಿಂಗ್ ವಿಡಿಯೋ, ಟೀಸರ್, ಯಶ್ ಕಿಲ್ಲಿಂಗ್ ಲುಕ್ ಚಿತ್ರದ ಬಗ್ಗೆ ಸಖತ್ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗ ಅಭಿಮಾನಿಗಳ ಒತ್ತಾಯಕ್ಕೆ ಯಶ್ ಕೆಜಿಎಫ್ ಸಿನಿಮಾದ ಮತ್ತೊಂದು ಡೈಲಾಗ್ ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ಯಶ್ ಕರಾವಳಿಯ ಕಡಲ ಕಿನಾರೆಗೆ ಭೇಟಿ ಕೊಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಶ್ ನೋಡಿದ ತಕ್ಷಣ ಅಭಿಮಾನಿಗಳು ಒಂದು ಡೈಲಾಗ್ ಹೇಳು ಅಣ್‍ತಮ್ಮ ಎಂದು ಕೂಗಿದ್ದರು. ಎರಡ್ಮೂರು ಡೈಲಾಗ್ ಕೇಳಿದ್ದರೂ ತೃಪ್ತಿ ಪಡದ ಅಭಿಮಾನಿಗಳು ಕೆಜಿಎಫ್ ಸಿನಿಮಾದ ಡೈಲಾಗ್ ಹೇಳಿ ಎಂದು ಡಿಮ್ಯಾಂಡ್ ಮಾಡಿದ್ದರು.
ಆಗ ಯಶ್ `ರಕ್ತದ ವಾಸನೇ ಕಂಡ್ರೆ ಒಟ್ಟಿಗೆ ಬರ್ತಾವೆ ಪಿರಾನ ಮೀನುಗಳು. ಆದ್ರೆ ಆ ಮೀನುಗಳಿಗೆ ಗೊತ್ತಿಲ್ಲಾ ಆ ರಕ್ತ ನಮ್ಮನ್ನ ಬೇಟೆ ಆಡೋಕೆ ಬಂದಿರೋ ತಿಮಿಂಗಲದ್ದು ಅಂತ’ ಎಂದು ಕೆಜಿಎಫ್ ಡೈಲಾಗ್ ಹೇಳಿದ್ದಾರೆ. ಇನ್ನೂ ಕೆಜಿಎಫ್‍ನ ಎಕ್ಸ್ ಕ್ಲೂಸಿವ್ ಡೈಲಾಗ್ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.