ಕಾಮಾಕ್ಷಿಪಾಳ್ಯದಲ್ಲಿ ಬೆಳ್ಳಂಬೆಳಗ್ಗೆ ಯುವಕನ ಕೊಚ್ಚಿ ಕೊಲೆ

BREAKING NEWS, Crime No Comments on ಕಾಮಾಕ್ಷಿಪಾಳ್ಯದಲ್ಲಿ ಬೆಳ್ಳಂಬೆಳಗ್ಗೆ ಯುವಕನ ಕೊಚ್ಚಿ ಕೊಲೆ 8
ಬೆಂಗಳೂರು: ನಗರದ ಕಾಮಾಕ್ಷಿ ಪಾಳ್ಯದ ಸಣ್ಣಕ್ಕಿ ಬಯಲಿನಲ್ಲಿ ಗುರುವಾರ ಬೆಳಗ್ಗೆ 7.30 ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ  ಕೊಚ್ಚಿ ಕೊಲೆಗೈದಿದ್ದಾರೆ. 
ಹತ್ಯೆಗೀಡಾದ ಯುವಕ ಕೋಟೇಶ್ವರ ರಾವ್‌ ಎಂದು ತಿಳಿದು ಬಂದಿದ್ದು, ಈತ ಕೆಂಗೇರಿ  ನಿವಾಸಿಯಾಗಿದ್ದು ಬ್ಯಾಂಕ್‌ ಮ್ಯಾನೇಜರ್‌ವೊಬ್ಬರ ಪುತ್ರ ಎಂದು ತಿಳಿದು ಬಂದಿದೆ. 
ಹತ್ಯೆ ವೇಳೆ ಜೊತೆಗಿದ್ದ ಸ್ನೇಹಿತನ ಮೇಲೂ ದಾಳಿ ನಡೆಸಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಬೆಳಗಿನ ಜಾವ ಮನೆಯಿಂದ ಸ್ನೇಹಿತನ ಜೊತೆ ಕೋಟೇಶ್ವರ ರಾವ್‌ ಬಂದಿದ್ದರು ಎನ್ನಾಲಾಗಿದೆ. 
ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಆಟೋದಲ್ಲಿ ಬಂದ ನಾಲ್ವರು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದ್ದು ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 
ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದೆ. 

Related Articles

Leave a comment

Back to Top

© 2015 - 2017. All Rights Reserved.