ಟೊಯೊಟಾ ಯಾರಿಸ್ ಕಾರುಗಳು ಮೆ18 ಕ್ಕೆ ಬಿಡಗಡಗೊಳ್ಳಲ್ಲಿದ್ದು ಇದೀಗ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ

Automobile No Comments on ಟೊಯೊಟಾ ಯಾರಿಸ್ ಕಾರುಗಳು ಮೆ18 ಕ್ಕೆ ಬಿಡಗಡಗೊಳ್ಳಲ್ಲಿದ್ದು ಇದೀಗ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ 100
2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಮೆ18 ಕ್ಕೆ ಬಿಡಗಡಗೊಳ್ಳಲ್ಲಿದ್ದು ಇದೀಗ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.
ವರದಿಗಳ ಪ್ರಕಾರ ಟೊಯೊಟಾ ಯಾರಿಸ್ ಜೆ,ಜಿ,ವಿ ಹಾಗು ವಿಎಕ್ಸ್ ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಎಲ್ಲಾ ವೇರಿಯಂಟ್‍‍ನ ಕಾರುಗಳು 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಹಾಗು 140ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.  
ಎಂಜಿನ್‍ಗಳನ್ನು ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಟೊಯೊಟಾ ಕಾರಿನ ಟಾಪ್ ಎಂಡ್ ವೇರಿಯಂಟ್ ಆದ ವಿಎಕ್ಸ್ ಕಾರುಗಳು ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಪಡೆಯದೆ ಸಿವಿಟಿ ಗೇರ್‍‍ಬಾಕ್ಸ್ ಅನ್ನು ಪಡೆದುಕೊಂಡಿವೆ. ಇದಲ್ಲದೆ ಟೊಯೊಟಾ ಯಾರಿಸ್ ಕಾರುಗಳು ಏಳು ಏರ್‍‍ಬ್ಯಾಗ್ಸ್, ಹಾಗು ಪ್ಯಾಂಥಮ್ ಬ್ರೌನ್, ವೈಲ್ಡ್ ಫೈರ್ ರೆಡ್, ಗ್ರೇ ಮೆಟಾಲಿಕ್, ಸಿಲ್ವರ್ ಮೆಟಾಲಿಕ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಮತ್ತು ಸೂಪರ್ ವೈಟ್ ಬಳ್ಳಗಳಲ್ಲಿ ಲಭ್ಯವಿರಲಿದೆ.

 

ಟೊಯೊಟಾ ‘ಜೆ’ ವೇರಿಯಂಟ್‍ ವೈಶಿಷ್ಟ್ಯತೆಗಳು: ಟೊಯೊಟಾ ಜೆ ವೇರಿಯಂಟ್ ಕಾರುಗಳು ಏಳು ಏರ್‍‍ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್ಸ್, ಎಂಜಿನ್ ಇಮ್ಮೊಬಿಲೈಸರ್, ಸೆಂಟ್ರಲ್ ಲಾಕಿಂಗ್, ಪವರ್ ಸ್ಟೀರಿಂಗ್, ಟಿಲ್ಟ್ ಸ್ಟೀರಿಂಗ್ ಅಡ್ಜಸ್ಟ್ ಮೆಂಟ್, ಕೀಲೆಸ್ ಎಂಟ್ರಿ, ಪವರ್ ವಿಂಡೋ, ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಲ್ಲ ಒಆರ್‍‍ವಿಎಂ, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟ್ ಮೆಂಟ್, ಕೂಲ್ಡ್ ಗ್ಲೋವ್ ಬಾಕ್ಸ್, ವಿವಿದ ಮಾಹಿತಿಯನ್ನು ತಿಳಿಸಿಕೊಡುವ ಎಲ್ಇಡಿ ಇಂಸ್ಟ್ರೂಮೆಂಟ್ ಕ್ಲಸ್ಟರ್, ರೀರ್ ಆರ್ಮ್‍ರೆಸ್ಟ್, ನಾಲ್ಕು ಸ್ಪೀಕರ್‍‍ಳುಳ್ಳ ಆಡಿಯೊ ಸಿಸ್ಟಂ ಮತ್ತು ಏಸಿಯನ್ನು ಪಡೆದುಕೊಂಡಿವೆ.
ಟೊಯೊಟಾ ‘ಜಿ’ ವೇರಿಯಂಟ್‍ ವೈಶಿಷ್ಟ್ಯತೆಗಳು: ಟೊಯೊಟಾ ಜಿ ವೇರಿಯಂಟ್‍ ಕಾರುಗಳು ರೀರ್ ಪಾರ್ಕಿಂಗ್ ಸೆನ್ಸಾರ್, ಮುಂಭಾಗ ಹಾಗು ಹಿಂಭಾಗದಲ್ಲಿ ಫಾಗ್ ಲ್ಯಾಂಪ್ಸ್, ಆಟೋ ಡೋರ್ ಲಾಕ್ ಹಾಗು ಅನ್‍‍ಲಾಕ್ ಸೆನ್ಸಾರ್ಸ್, ರೀರ್ ಡೀಫೋಗರ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ನಾಲ್ಕು ಸ್ಪೀಕರ್‍‍ಗಳು, ಕ್ರೋಮ್ ಗ್ರಿಲ್, ವಿದ್ಯುತ್‍ ಒಆರ್‍‍ವಿಎಂ, ಸ್ಟೀರಿಂಗ್ ಮೌನ್‍‍ಟೆಡ್ ಆಡಿಯೊ ಕಂಟ್ರೋಲ್ಸ್, ಸ್ಮಾರ್ಟ್ ಎಂಟ್ರಿ ಹಾಗು ಪುಶ್ ಬಟನ್ ಸ್ಟಾರ್ಟ್ ವೈಶಿ ಷ್ಟ್ಯತೆಗಳನ್ನು ಪಡೆದಿದೆ.
ಟೊಯೊಟಾ ‘ವಿ’ ವೇರಿಯಂಟ್‍ ವೈಶಿಷ್ಟ್ಯತೆಗಳು: ಟೊಯೊಟಾ ‘ವಿ’ ವೇರಿಯಂಟ್‍ ಕಾರಿನ ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ಸ್, ಆರು ಸ್ಪೀಕರ್‍‍ಗಳುಳ್ಳ ಏಳು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಎಲ್ಇಡಿ ಟೈಲ್‍‍ಲ್ಯಾಂಪ್ಸ್, ಫಾಲೊ ಮೋ ಫೀಚರ್ ಸೇರಿತ ಆಟೋ ಹೆಡ್‍‍ಲ್ಯಾಂಪ್‍ಗಳು, 15 ಇಂಚಿನ ಅಲಾಯ್ ಚಕ್ರಗಳು, ಮೊಂಭಾಗ ಹಾಗು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‍‍ಗಳು ಹಾಗು ರೈನ್ ಸೆನ್ಸಿಂಗ್ ವೈಪರ್‍‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.
ಟೊಯೊಟಾ ಟಾಪ್ ಎಂಡ್ ‘ವಿಎಕ್ಸ್’ ವೇರಿಯಂಟ್‍ ವೈಶಿಷ್ಟ್ಯತೆಗಳು: ಟೊಯೊಟಾ ಟಾಪ್ ಎಂಡ್ ‘ವಿಎಕ್ಸ್’ ವೇರಿಯಂಟ್‍ ಕಾರುಗಳಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಪ್ಯಾಡಲ್ ಶಿಫ್ಟರ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಲೆಧರ್ ಸೀಟ್ಸ್, ಎಂಟು ಮಾದರಿಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‍, ರೀರ್ ಸನ್‍‍ಶೈನ್, ಎಲ್ಇಡಿ ಡಿಎಲ್‍ಆರ್ ಹಾಗು ಕ್ರೋಮ್ ಡೋರ್ ಹ್ಯಾಂಡಲ್‍‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.
ಗ್ರಾಹಕರು ಟೊಯೊಟಾ ಸಂಸ್ಥೆಯ ಯಾರಿಸ್ ಸೆಡಾನ್ ಕಾರುಗಳ ಖರೀದಿಗಾಗಿ ರೂ. 50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದ್ದು, ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ 10 ರಿಂದ 12 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ. ಸೆಡಾನ್ ಕಾರುಗಳಲ್ಲೇ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದ್ದು, ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

Related Articles

Leave a comment

Back to Top

© 2015 - 2017. All Rights Reserved.