ತಾಜ್‌: ಶಹಜಹಾನ್‌ ಸಹಿ ತೋರಿಸಿ

National, News No Comments on ತಾಜ್‌: ಶಹಜಹಾನ್‌ ಸಹಿ ತೋರಿಸಿ 10
ಹೊಸದಿಲ್ಲಿ: “ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ವಕ್ಫ್ ಆಸ್ತಿಯೇ? ಭಾರತದಲ್ಲಿ ಇದನ್ನು ಯಾರಾದರೂ ನಂಬುತ್ತಾರೆಯೇ? ವಕ್ಫ್ನಾಮಾಗೆ ಶಹಜಹಾನ್‌ ಸಹಿ ಮಾಡಿದ್ದು ಎಂದು? ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದು ಯಾವಾಗ? ಈ ಬಗ್ಗೆ ದಾಖಲೆಗಳಿದ್ದರೆ ವಾರದೊಳಗೆ ತಂದು ತೋರಿಸಿ’! “ಪ್ರೇಮ ಸೌಧ’ದ ಕುರಿತು ಇಂಥ ಪ್ರಶ್ನೆಗಳನ್ನೆಲ್ಲ ಹಾಕಿದ್ದು ಮತ್ಯಾರೂ ಅಲ್ಲ, ಸುಪ್ರೀಂಕೋರ್ಟ್‌ ಮುಖ್ಯ
ನ್ಯಾ| (ಸಿಜೆಐ) ದೀಪಕ್‌ ಮಿಶ್ರಾ ನೇತೃತ್ವದ ಪೀಠ. ತಾಜ್‌ ಮಹಲ್‌ ಒಡೆತನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅವರು ಇಂಥ ಖಡಕ್‌ ಪ್ರಶ್ನೆಗಳನ್ನು ಕೇಳಿ ಅಚ್ಚರಿ ಮೂಡಿಸಿದ್ದಾರೆ.
1631ರಲ್ಲಿ ಪ್ರೇಯಸಿ ಮಮ್ತಾಜ್‌ಳ ಪ್ರೀತಿಯ ಸಂಕೇತವಾಗಿ ಕಟ್ಟಿಸಲಾದ ವಿಶ್ವ ಪ್ರಸಿದ್ಧ ತಾಜ್‌ಮಹಲ್‌ ಅನ್ನು ಮೊಘಲ್‌ ಚಕ್ರವರ್ತಿ ಶಹಜಹಾನ್‌ ಸ್ವತಃ ಸಹಿ ಮಾಡಿ ತಮಗೆ ಬರೆದುಕೊಟ್ಟಿದ್ದಾರೆ ಎಂದು ಉತ್ತರಪ್ರದೇಶ ವಕ್ಫ್ ಮಂಡಳಿ ಕೋರ್ಟ್‌ ಮೆಟ್ಟಿಲೇರಿತ್ತು. ಇದನ್ನು ಪ್ರಶ್ನಿಸಿ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) 2010ರಲ್ಲಿ ಪ್ರತಿವಾದ ಮಂಡಿಸಿ ಅರ್ಜಿ ಸಲ್ಲಿಸಿತ್ತು. ವಕ್ಫ್ ಮಂಡಳಿ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಎಎಸ್‌ಐ ಹೇಳಿತ್ತು.
ಈ ಸಂಬಂಧ ಮುಖ್ಯ ನ್ಯಾ| ದೀಪಕ್‌ ಮಿಶ್ರಾ, ಎ.ಎಂ. ಖನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿದೆ. 

Related Articles

Leave a comment

Back to Top

© 2015 - 2017. All Rights Reserved.