ಐಪಿಎಲ್ ಹಬ್ಬ : ನಮ್ಮ ಮೆಟ್ರೋ ಸೇವಾ ಅವಧಿ ವಿಸ್ತರಣೆ

Sports, Top News No Comments on ಐಪಿಎಲ್ ಹಬ್ಬ : ನಮ್ಮ ಮೆಟ್ರೋ ಸೇವಾ ಅವಧಿ ವಿಸ್ತರಣೆ 9

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ಪಂದ್ಯಾವಳಿ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರದ ಅವಧಿಯಲ್ಲಿ ವಿಸ್ತರಣೆ ಮಾಡಲಾಗಿದೆ.

ರಾತ್ರಿ 12.30 ರ ವರೆಗೂ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ನಡೆಯುವ ದಿನಗಳಂದು ರಾತ್ರಿ 12.30 ರ ವರೆಗೂ ನಮ್ಮ ಮೆಟ್ರೋ ಸಂಚಾರವಿರುತ್ತದೆ.

ಜನದಟ್ಟಣೆ ನಿವಾರಿಸುವ ಉದ್ದೇಶದಿಂದ ರಿಟರ್ನ್ ಟಿಕೆಟ್ ನೀಡಲಾಗ್ತಿದೆ. ಮೊದಲ ಬಾರಿಗೆ ರಿಟರ್ನ್ ಟಿಕೆಟ್ ಪರಿಚಯಿಸಲಾಗಿದ್ದು, ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳಲ್ಲಿ ಟಿಕೆಟ್ ಲಭ್ಯವಿವೆ. ರಿಟರ್ನ್ ಟಿಕೆಟ್ ಬೆಲೆ 50 ರೂ. ನಿಗದಿಪಡಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.