ರಷ್ಯಾಗೆ ಟ್ರಂಪ್ ಕ್ಷಿಪಣಿ ದಾಳಿ ಬೆದರಿಕೆ

International, News No Comments on ರಷ್ಯಾಗೆ ಟ್ರಂಪ್ ಕ್ಷಿಪಣಿ ದಾಳಿ ಬೆದರಿಕೆ 5

ವಾಷಿಂಗ್ಟನ್‌: ಸಿರಿಯಾ ಕೆಮಿಕಲ್‌ ಅಟ್ಯಾಕ್‌ ಕುರಿತು ಅಮೆರಿಕ- ರಷ್ಯಾ ವಾಕ್ಸಮರ ತೀವ್ರಗೊಂಡಿದ್ದು, “ಸಿರಿಯಾ ಮೇಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಕ್ಷಿಪಣಿಗಳ ಮಳೆಯೇ ಸುರಿಯಲಿವೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ರಷ್ಯಾಗೆ ಎಚ್ಚರಿಕೆ ಕೊಟ್ಟಿದ್ದಾರೆ.

“ರಷ್ಯಾ ಸಿದ್ಧಗೊಳ್ಳಲಿ. ಏಕೆಂದರೆ ಹೊಸ ಹಾಗೂ ಸ್ಮಾರ್ಟ್‌ ಕ್ಷಿಪಣಿಗಳು ಬರುತ್ತಿವೆ. ನೀವೇನಿದ್ದರೂ ಮನುಷ್ಯರನ್ನೇ ಕೊಂದು ಮಜಾ ಮಾಡುವವರಲ್ಲವೇ’ ಎಂದು  ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಶನಿವಾರ ಸಿರಿಯಾದಲ್ಲಿ ನಡೆದಿದ್ದ ದಾಳಿಗೆ 40 ಮಂದಿ ಬಲಿಯಾದ ಬೆನ್ನಲ್ಲೇ ಟ್ರಂಪ್‌ ಈ ಎಚ್ಚರಿಕೆ ರವಾನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ, “ದಾಳಿ ನಡೆಸಿದ್ದು ಯಾರು ಎಂಬ ತೀರ್ಮಾನಕ್ಕೆ ಬರುವ ಮೊದಲು ಪೂರ್ವಗ್ರಹವಿಲ್ಲದ ತನಿಖೆ ನಡೆಸಲಿ’ ಎಂದು ಹೇಳಿದೆ. ಟ್ರಂಪ್‌ ಟ್ವೀಟ್‌ಗೆ ಪ್ರತಿ ಕ್ರಿಯಿಸಿ ರುವ ಸಿರಿಯಾದ ಸುದ್ದಿ ಸಂಸ್ಥೆ ಅಮೆರಿಕ ಅಧ್ಯಕ್ಷರ ಸಂದೇಶ ಅನಗತ್ಯ ಕಿರುಚಾಟ ಎಂದು ಟೀಕಿಸಿದೆ. 

 

Related Articles

Leave a comment

Back to Top

© 2015 - 2017. All Rights Reserved.