ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ‌. ಕಾರಣ ಕೇಳಿ ತೆಲಂಗಾಣ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ನೋಟಿಸ್

Entertainment, National, News, Top News No Comments on ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ‌. ಕಾರಣ ಕೇಳಿ ತೆಲಂಗಾಣ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ನೋಟಿಸ್ 23

ಟಾಲಿವುಡ್ ನಲ್ಲಿ ಅವಕಾಶಕ್ಕಾಗಿ ಮಹಿಳೆಯರನ್ನ ದುರ್ಬಳಕೆ ಮಾಡುತ್ತಿದ್ದಾರೆಂಬ ಆರೋಪ ಮಾಡಿ ತೆಲುಗು ಫಿಲಂ ಚೇಂಬರ್ ವಿರುದ್ದ ನಟಿ ಶ್ರೀ ರೆಡ್ಡಿ ಅರೆಬೆತ್ತಲೆ ನಡೆಸಿದ್ದನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ನಟಿ ಶ್ರೀ ರೆಡ್ಡಿ ನಟ ನಾಣಿ, ರಾಣ ದಗ್ಗುಬಾಟಿ ಸಹೋದರ ಸೇರಿ ಹಲವು ಸ್ಟಾರ್ ನಟ, ನಿರ್ದೇಶಕರ ವಿರುದ್ದ ಲೈಂಗಿಲ ಕಿರುಕುಳದ ಆರೋಪ ಮಾಡಿದ್ದರು. ಇದನ್ನ ವಿರೋಧಿಸಿ ಕೆಲವು ದಿನಗಳ ಹಿಂದೆ ತೆಲುಗು ಫಿಲ್ಮ್ ಚೆಂಬರ್ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು.

 ಇದೀಗ ಎನ್‌‌ಹೆಚ್‌ಆರ್‌ಸಿ, ತೆಲಂಗಾಣ ಸರ್ಕಾರ ಹಾಗೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಇಡೀ ಪ್ರಕರಣದ ವರದಿ ಸಲ್ಲಿಸುವಂತೆ ಸೂಚಿಸಿದೆ.

Related Articles

Leave a comment

Back to Top

© 2015 - 2017. All Rights Reserved.