2017 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರಕಟ : ಹೆಬ್ಬೆಟ್ಟು ರಾಮಕ್ಕ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ

Entertainment, National, News, Regional No Comments on 2017 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರಕಟ : ಹೆಬ್ಬೆಟ್ಟು ರಾಮಕ್ಕ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ 67

2017ನೇ ಸಾಲಿನ 65 ನೇರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದೆ. ನಟಿ ತಾರಾ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕೆ “ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ” ಪ್ರಶಸ್ತಿ ಲಭಿಸಿದೆ‌.

ಬೆಂಗಾಲಿ ಸಿನಿಮಾ ‘ನಗರ್ ಕಿರ್ತನ್’ ಚಿತ್ರದ ಅಭಿನಯಕ್ಕಾಗಿ ರಿದ್ಧಿ ಸೇನ್ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರೆ, ‘ಮಾಮ್’ ಚಿತ್ರದಲ್ಲಿನ ನಟನೆಗಾಗಿ ‘ಅತಿಲೋಕ ಸುಂದರಿ’ ದಿವಂಗತ ನಟಿ ಶ್ರೀದೇವಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ. ನವದೆಹಲಿಯ ಶಾಸ್ತ್ರಿ ಭವನ್ ನಲ್ಲಿರುವ ಪಿ.ಐ.ಬಿ ಕಾನ್ಫರೆನ್ಸ್ ರೂಮ್ ನಲ್ಲಿ 2017ನೇ ಸಾಲಿನ ಪ್ರತಿಷ್ಟಿತ 65ನೇ ರಾಷ್ಟ್ರೀಯ ಪ್ರಶಸ್ತಿಯನ್ನ ಘೋಷಿಸಲಾಗುತ್ತಿದೆ. ನಿರ್ದೇಶಕ ಶೇಖರ್ ಕಪೂರ್ ನೇತೃತ್ವದ ಜ್ಯೂರಿಯಲ್ಲಿ ದಕ್ಷಿಣ ಭಾರತದ ನಟಿ ಗೌತಮಿ, ಕನ್ನಡ ನಿರ್ದೇಶಕ ಪಿ.ಶೇಷಾದ್ರಿ ಸೇರಿದಂತೆ ಒಟ್ಟು 10 ಸದಸ್ಯರಿದ್ದರು. ಮೇ 3 ರಂದು 65ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

2017ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದವರ ವಿವರ

 ನಟ: ರಿದ್ಧಿ ಸೇನ್ (ಬೆಂಗಾಲಿ ಚಿತ್ರ: ನಗರ್ ಕಿರ್ತನ್

ಅತ್ಯುತ್ತಮ ನಟಿ: ದಿವಂಗತ ನಟಿ ಶ್ರೀದೇವಿ (ಚಿತ್ರ: ಮಾಮ್)

ಅತ್ಯುತ್ತಮ ಪೋಷಕ ನಟ: ಫಹಾದ್ ಫಾಝಿಲ್

ಅತ್ಯುತ್ತಮ ಪೋಷಕ ನಟಿ: ದಿವ್ಯಾ ದತ್ತಾ (ಚಿತ್ರ: ಇರಾದಾ) 

ಬಾಹುಬಲಿ’ಗೆ ದೊರಕಿತು ರಾಷ್ಟ್ರ ಪ್ರಶಸ್ತಿ ಅತ್ಯುತ್ತಮಮನರಂಜನಾ ಚಿತ್ರ: ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ: ದಿ ಕನ್ ಕ್ಲೂಶನ್

ಅತ್ಯುತ್ತಮ ಚಿತ್ರ: ವಿಲೇಜ್ ರಾಕ್ ಸ್ಟಾರ್ಸ್ (ಅಸ್ಸಾಮೀಸ್)

ಯೇಸುದಾಸ್ ಮುಡಿಗೆ ರಾಷ್ಟ್ರ ಪ್ರಶಸ್ತಿ ಗರಿ

ಅತ್ಯುತ್ತಮ ಹಿನ್ನಲೆ ಗಾಯಕ: ಕೆ.ಜೆ.ಯೇಸುದಾಸ್ (ಹಾಡು: ಪೊಯಿ ಮರಂಜಾ ಕಲಂ, ಚಿತ್ರ: ವಿಶ್ವಾಸಪೂರ್ವಂ ಮನ್ಸೂರ್)

ಅತ್ಯುತ್ತಮ ಹಿನ್ನಲೆ ಗಾಯಕಿ: ಶಾಶಾ ತಿರುಪತಿ (ಹಾಡು: ವಾನ್, ಚಿತ್ರ: ಕಾಟ್ರು ವೇಲಿಯಿದೈ)

ಅತ್ಯುತ್ತಮ ಸಾಹಿತ್ಯ: ಪ್ರಹ್ಲಾದ್ (ಚಿತ್ರ: ಮಾರ್ಚ್ 22, ಹಾಡು: ಮುತ್ತು ರತ್ನದ ಪ್ಯಾಟೆ)

ವಿನೋದ್ ಖನ್ನಾಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ದಿವಂಗತ ನಟ ವಿನೋದ್ ಖನ್ನಾ

ಅತ್ಯುತ್ತಮ ನಿರ್ದೇಶಕ: ಜಯರಾಜ್ (ಮಲಯಾಳಂ ಚಿತ್ರ: ಭಯಾನಕಂ)

ಇಂದಿರಾ ಗಾಂಧಿ ಪ್ರಶಸ್ತಿ (ನಿರ್ದೇಶಕರ ಚೊಚ್ಚಲ ಚಿತ್ರ): ನಿರ್ದೇಶಕ ಪಾಂಪಲ್ಲಿ (ಚಿತ್ರ: ಸಿಂಜಾರ್)

‘ಮೋರ್ಕ್ಯಾ’ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್

ಅತ್ಯುತ್ತಮ ಮಕ್ಕಳ ಚಿತ್ರ: ಅಮರ್ ಭರತ್ ದಿಯೋಕರ್ ನಿರ್ದೇಶನದ ‘ಮೋರ್ಕ್ಯಾ’

ಅತ್ಯುತ್ತಮ ಬಾಲ ನಟ: ಬನಿತಾ ದಾಸ್ (ಅಸ್ಸಾಮೀಸ್ ಚಿತ್ರ: ವಿಲೇಜ್ ರಾಕ್ ಸ್ಟಾರ್ಸ್)

 

 

Related Articles

Leave a comment

Back to Top

© 2015 - 2017. All Rights Reserved.