ಉನ್ನಾವೋ ಅತ್ಯಾಚಾರ ಖಂಡಿಸಿ : ಮನೆಯಲ್ಲಿ ಮಗಳಿದ್ದಾಳೆ ಒಳಗೆ ಬರಬೇಡಿ ಬಿಜೆಪಿ ನಾಯಕರೇ ಎಂದು ಪ್ರತಿಭಟನೆ

National, News No Comments on ಉನ್ನಾವೋ ಅತ್ಯಾಚಾರ ಖಂಡಿಸಿ : ಮನೆಯಲ್ಲಿ ಮಗಳಿದ್ದಾಳೆ ಒಳಗೆ ಬರಬೇಡಿ ಬಿಜೆಪಿ ನಾಯಕರೇ ಎಂದು ಪ್ರತಿಭಟನೆ 12

ತಿರುವನಂತಪುರಂ: ಉನ್ನಾವೊ ಹಾಗೂ ಕಟುವಾ ಪ್ರಕರಣಗಳಿಂದಾಗಿ ಇಡೀ ದೇಶವೇ ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣ ಆಗಿದೆ. ಕಾಮುಕರ ದುಷ್ಕೃತ್ಯವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೀತಿದೆ. ಅದ್ರಂತೆ ಕೇರಳದಲ್ಲಿ ಬಿಜೆಪಿ ವಿರುದ್ಧ ವಿನೂತನ ಚಳುವಳಿ ಶುರುವಾಗಿದೆ. ಸಿಪಿಎಂನ ಭದ್ರಕೋಟೆ ಚೆಂಗಣ್ಣೂರು ಕ್ಷೇತ್ರದ ವಾಮನಪುರಂನ ಮನೆ ಮುಂದೆ ಆಸೀಫಾಳ ಫೋಟೋ ಹಾಕಿ ‘ಬಿಜೆಪಿಗೆ ನೋ ಎಂಟ್ರಿ’ ಅನ್ನೋ ಬೋರ್ಡ್​ಗಳನ್ನು ಅಂಟಿಸಿದ್ದಾರೆ.

 

ಹತ್ತು ವರ್ಷದೊಳಗಿನ ಮಗು ನಮ್ಮ ಮನೆಯೊಳಗೆ ಇದ್ದಾಳೆ. ಬಿಜೆಪಿ ನಾಯಕಱರೂ ವೋಟ್ ಕೇಳುವ ಸಂಬಂಧ ಮನೆಯ ಬಾಗಿಲನ್ನು ತಟ್ಟ ಬೇಡಿ. *** ನಿಮ್ಮ ಕೃತ್ಯದಿಂದಾಗಿ ಇಡೀ ದೇಶವೇ ಶೋಕದಲ್ಲಿ ಮುಳುಗಿದೆ. ಇಲ್ಲಿ ಸಂಘ ಪರಿವಾರದವ್ರಿಗೆ ಪ್ರವೇಶ ಇಲ್ಲ. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ದಯಮಾಡಿ ನೀವು ಮನೆಯ ಕದವನ್ನು ತಟ್ಟ ಬೇಡಿ’ ಎಂದು ಬರೆದು ಮನೆಯ ಮುಂದೆ ಅಂಟಿಸಿದ್ದಾರೆ.

‘ನೀವು ಯಾವುದೇ ಕಾರಣಕ್ಕೂ ಮನೆಯ ಗೇಟ್​ ಪ್ರವೇಶ ಮಾಡಬೇಡಿ. ಒಂದು ವೇಳೆ ಹತ್ತಿರ ಬಂದರೂ ಗೇಟ್ ದಾಟಬೇಡಿ’ ಎಂದು ಮನೆಯ ಗೋಡೆಗೆ ಹಾಗೂ ಬಾಗಿಲಿಗೆ ಅಂಟಿಸಿದ್ದಾರೆ. ಸಿಪಿಎಂನ ಕಾರ್ಯಕರ್ತತರು ಈ ರೀತಿ ಚಳವಳಿ ಮಾಡುತ್ತಿದ್ದಾರೆ. ದೇಶದಲ್ಲಿ ಇತ್ತೀಚೆಗೆ ನಡೆದ ಹೀನ ಕೃತ್ಯಗಳ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಆರೋಪಿಸಿ ಈ ವಿನೂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ವಾಟ್ಸಾಪ್ ಮೂಲಕವೂ ಘಟನೆಯನ್ನು ಖಂಡಿಸಲಾಗುತ್ತಿದೆ. ನಿನ್ನೆ ರಾತ್ರಿಯಿಂದ ಸಿಪಿಎಂನ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಮನೆ ಮುಂದೆ ಈ ರೀತಿಯ ಬೋರ್ಡ್​ಗಳನ್ನು ಹಾಕಿಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.