ಚಾಮುಂಡೇಶ್ವರಿಯಲ್ಲಿ ಇನ್ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

BREAKING NEWS, News, Regional No Comments on ಚಾಮುಂಡೇಶ್ವರಿಯಲ್ಲಿ ಇನ್ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ 99

ಮೈಸೂರು : ಇಲ್ಲಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉದ್ಬುರು ಗ್ರಾಮದಲ್ಲಿ ಇಂದು ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಬಸವರಾಜು ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಮೂರ್ತಿ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಜಿ.ಟಿ ದೇವೇಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇವರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಿತಾಂಬರ, ಎ. ಮೂರ್ತಿ, ಶಿವಣ್ಣ, ಶೋಭಾ ಶಂಕರ, ರುಕ್ಮಿಣಿ ಹನುಮಂತನಾಯ್ಕ, ಪರಶಿವ, ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಗೋವಿಂದು, ಸುಮಾ ಬಲರಾಮ್, ಸುರೇಶ್, ಅಂಕಪ್ಪ, ದಂಡೆಮ್ಮ ಸೋಮಣ್ಣ ಹಾಗೂ ಇನ್ನು ಅನೇಕರು ಜೆ.ಡಿ.ಎಸ್ ಪಕ್ಷ‌‌ ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಜಯಪುರ ಜಿಲ್ಲಾ ಪಂಚಾಯತ್ ಸದಸ್ಯ ಉದ್ಬುರು ಮಹದೇವಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.