ಟಿಕೇಟ್ ವಂಚಿತ ನಾಯಕರೆಲ್ಲಾ ಜೆಡಿಎಸ್ ನತ್ತ ಚಿತ್ತ

BREAKING NEWS, News, Regional No Comments on ಟಿಕೇಟ್ ವಂಚಿತ ನಾಯಕರೆಲ್ಲಾ ಜೆಡಿಎಸ್ ನತ್ತ ಚಿತ್ತ 17
  • ಬೆಂಗಳೂರು :ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಟಿಕೆಟ್ ಕೈತಪ್ಪಿರುವ ಆಕಾಂಕ್ಷಿಗಳು ಜೆಡಿಎಸ್‌‌ನತ್ತ ಮುಖಮಾಡಿದ್ದಾರೆ ಎನ್ನಲಾಗಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಚಿತ್ರನಟಿ ಅಮೂಲ್ಯ ಅವರ ಮಾವ ಹಾಗೂ ಮಾಜಿ ಕಾರ್ಪೋರೇಟರ್ ಆರ್.ರಾಮಚಂದ್ರಪ್ಪ ಜೆಡಿಎಸ್ ಸೇರಿದ್ದು, ಆರ್.ಆರ್.ನಗರದಿಂದ ಅವರಿಗೆ ಜೆಡಿಎಸ್ ಟಿಕೆಟ್ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. 

ಬಿಜೆಪಿಗೆ ರಾಜೀನಾಮೆ ನೀಡಿದ್ದ ಆರ್.ರಾಮಚಂದ್ರ, ಈಗ ಜೆಡಿಎಸ್‌‌‌ನಿಂದ ಟಿಕೆಟ್ ನಿರೀಕ್ಷಿಸುತ್ತಿದ್ದಾರೆ. ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಸಹ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. 

  • ದೇವೇಗೌಡರನ್ನು ಭೇಟಿ ಮಾಡಿದ ಕಾಂಗ್ರೆಸ್‌‌‌ನ ಪಿ.ರಮೇಶ್: 

    ಕಾಂಗ್ರೆಸ್‌‌ನಿಂದ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಸಿ.ವಿ.ರಾಮನ್ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪಿ.ರಮೇಶ್ ಇಂದು ಮಧ್ಯಾಹ್ನ ಮಾಜಿ ಪ್ರಧಾನಿ ಹೆಚ್‌‌‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಎಲ್.ಆರ್. ಶಿವರಾಮೇಗೌಡರ ಜೊತೆಯಲ್ಲಿ ತೆರಳಿದ ಪಿ.ರಮೇಶ್, ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಜೊತೆ ಈ ಕುರಿತು ಮಾತುಕತೆ ನಡೆಸಿದರು. 

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಪಿ.ರಮೇಶ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಅಲ್ಲದೆ ಉತ್ತರಪ್ರದೇಶ ಮಾಜಿ ಸಿಎಂ, ಬಿಎಸ್‌‌ಪಿ ಪಕ್ಷದ ನಾಯಕಿ ಮಾಯಾವತಿ ಅವರು ಏ. 24 ಮತ್ತು 25 ರಂದು ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು. 

Related Articles

Leave a comment

Back to Top

© 2015 - 2017. All Rights Reserved.