ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಪ್ರಚಾರ

BREAKING NEWS, News, Regional No Comments on ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಪ್ರಚಾರ 39

ಮೈಸೂರು:- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಪ್ರವಾಸಕ್ಕೂ ಮುನ್ನಾ ಮೈಸೂರಿನ ಟೌನ್ ಹಾಲ್ ಬಳಿ ಇರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಚಾಮುಂಡೇಶ್ವರಿ ಪ್ರಚಾರಕ್ಕೂ ಮುನ್ನಾ ಮಾಧ್ಯಮದೊಂದಿಗೆ ಹೆಚ್.ಡಿ.ಕೆ ಮಾತನಾಡಿ, ನಾನು ಸ್ಪರ್ದೀಸಲಿರುವ ಕ್ಷೇತ್ರಗಳಲ್ಲಿ ಸಿಎಂ ಒಂದು ದಿನ ಅಲ್ಲ. ಒಂದು ತಿಂಗ್ಳು ಪ್ರವಾಸ ಮಾಡಲಿ. ನಾನು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೊಗಲ್ಲ. ಆದ್ರೂ ಆ ಕ್ಷೇತ್ರಗಳ ಜನ ನನ್ನನ್ನ ಗೆಲ್ಲಿಸುತ್ತಾರೆ.
ರಾಮನಗರ ಜನತೆ ನನ್ನ ನಡುವೆ ತಾಯಿ ಮಗನ ಸಂಬಂಧ ಅನ್ನೊದು ಎಲ್ರಿಗೂ ಗೊತ್ತಿದೆ.


ರಾಮನಗರಕ್ಕೂ ಸಿದ್ದರಾಮಯ್ಯಗೂ ಸಂಬಂಧ ಇಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಿದ್ದರಾಮಯ್ಯ ಗಿಂತಲೂ ಹೆಚ್ಚು ಕೆಲಸ ಮಾಡಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ನೂರು ಹಳ್ಳಿಗಳಲ್ಲಿ ಪ್ರಚಾರ ಮಾಡ್ತಿನಿ.
ಜಿ.ಟಿ.ದೇವೇಗೌಡರೇ ಚುನಾವಣೆ ಎದುರಿಸಲು ಸಮರ್ಥವಾಗಿದ್ದಾರೆ. ಆದರೂ ಆಯ್ದ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವೆ. ನಾಮಪತ್ರ ಸಲ್ಲಿಕೆ ನಂತರ ಮತ್ತೊಮ್ಮೆ ಎಲ್ಲೆಡೆ ಪ್ರವಾಸ ಹೋಗುತ್ತೇನೆ ಎಂದರು.

ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ವಿಚಾರ, ಯಾವುದೇ ಸಮೀಕ್ಷೆಗಳ ಬಗ್ಗೆ ನನ್ನ ತಕರಾರಿಲ್ ಲ.ನಾನು ಕಿಂಗ್ ಮೇಕರ್ ಅಲ್ಲ, ಜನ ನನ್ನನ್ನ ಕಿಂಗ್ ಮಾಡೋಕೆ ತೀರ್ಮಾನ ಮಾಡಿದ್ದಾರೆ. ಈ ಹಿಂದೆ ತಮ್ಮ ಪಕ್ಷದ ಹೆಸರನ್ನ ಹೇಳದೆ ಎರಡು ಸ್ಥಾನಕ್ಕೆ ನಿಲ್ಲಿಸಿದ್ರು. ಆಗ ನಾನು ೫೮ ಸ್ಥಾನ ಗೆದ್ದಿದ್ದೆ. ಹಿಂದಿನ ದಿನಗಳಿಗಿಂತ ಈಗ ಪಕ್ಷದ ವರ್ಚಸ್ಸು ಹೆಚ್ಚಾಗಿದೆ. ಇಂಡಿಯಾ ಟುಡೇ ಹೇಳಿರುವ ಕಾಂಗ್ರೆಸ್ ಗೆಲ್ಲುವ ನೂರು ಸ್ಥಾನ, ಜೆಡಿಎಸ್’ಗೆ ಬರುತ್ತೆ. ಕಾಂಗ್ರೆಸ್’ಗೆ 40 ಸ್ಥಾನ ಬರುತ್ತದೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಇಂಡಿಯಾ ಟುಡೇ ಸಮೀಕ್ಷೆ ಯಾವ ರೀತಿ ಮಾಡಿದ್ದಾರೆ ನನಗೆ ತಿಳಿದಿಲ್ಲ
ಎಂದರು.

Related Articles

Leave a comment

Back to Top

© 2015 - 2017. All Rights Reserved.