ಪಂಜಾಬಿ ಗಾಯಕನ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ

Entertainment, National, News No Comments on ಪಂಜಾಬಿ ಗಾಯಕನ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ 15

ಚಂಡಿಗಢ :  ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಹಾಗೂ ಅವರ ಸ್ನೇಹಿತನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಮೊಹಾಲಿಯ ಸೆಕ್ಟರ್ 74 ರಲ್ಲಿ ಶುಕ್ರವಾರ ತಡ ರಾತ್ರಿ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಗಾಯಗೊಂಡಿರುವ ಪರ್ಮಿಶ್ ಹಾಗೂ ಆತನ ಸ್ನೇಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಂಡಿನ ದಾಳಿಯಲ್ಲಿ ಪರ್ಮಿಶ್ ಅವರ ಕಾಲಿಗೆ ಗುಂಡೇಟು ತಗುಲಿದೆ. ರಾತ್ರಿ ವೇಳೆ ಕಾರ್ಯಕ್ರಮವೊಂದರ ಪ್ರಚಾರ ಕಾರ್ಯ ನಡೆಸಿ ಹಿಂದಿರುಗುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲ್ ದೀಪ್ ಚಹಲ್ ಮಾಹಿತಿ ನೀಡಿದ್ದಾರೆ.

ಪರ್ಮಿಶ್ ವರ್ಮಾ ಪಂಜಾಬಿಯ ಖ್ಯಾತ ಗಾಯಕರಾಗಿದ್ದು, ಇವರ ಸೂಪರ್ ಹಿಟ್ ‘ಗಾಲ್ ನಿ ಕದ್ನಿ’ ಹಾಡನ್ನು ಸುಮಾರು 11 ಕೋಟಿ ಬಾರಿ ವಿಕ್ಷಣೆ ಮಾಡಲಾಗಿದೆ. ಇವರ ಇತ್ತೀಚಿನ ಮತ್ತೊಂದು ಹಾಡು ಸಹ ಹಿಟ್ ಲಿಸ್ಟ್ ನಲ್ಲಿ ಸೇರಿತ್ತು. ಪಮಿರ್ಶ್ ಜನಪ್ರಿಯತೆ ಹೆಚ್ಚಾಗುತ್ತಿದಂತೆ ಗ್ಯಾಂಗ್‍ಸ್ಟರ್ ಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಗ್ಯಾಂಗ್ ಸ್ಟರ್ ಕೈವಾಡ?
ಘಟನೆ ಬಳಿಕ ಪರ್ಮಿಶ್ ಮೇಲೆ ತಾವೇ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಗ್ಯಾಂಗ್‍ಸ್ಟರ್ ದಿಲ್ ಪ್ರೀತ್ ಸಿಂಗ್ ದಹನ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಪೋಸ್ಟ್ ನಲ್ಲಿ ಗ್ಯಾಂಗ್ ನ ವ್ಯಕ್ತಿ ಪಿಸ್ತೂಲ್ ನೊಂದಿಗೆ ಪರ್ಮಿಶ್ ಫೋಟೋವನ್ನು ಹಾಕಿ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.