ಒನ್ ಪ್ಲಸ್ -6 ಪೋನ್ ಬೆಲೆ ಲೀಕ್

Automobile, Technology No Comments on ಒನ್ ಪ್ಲಸ್ -6 ಪೋನ್ ಬೆಲೆ ಲೀಕ್ 43

ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಎಲ್ಲಾ ರೂಮರ್ಸ್‌ಗಳಿಗೂ ಬ್ರೇಕ್ ನೀಡಿ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಫೀಚರ್ಸ್ ಬಗ್ಗೆ ಈಗಾಗಲೇ ನಿಖರ ಮಾಹಿತಿ ಹೊರಬಿದ್ದಿರುವುದು ನಿಮಗೆಲ್ಲಾ ತಿಳಿದಿದೆ ಎನ್ನಬಹುದು. ಒನ್‌ಪ್ಲಸ್ ಕಂಪೆನಿಯಿಂದಲೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಬಗ್ಗೆ ಎಲ್ಲಾ ಮಾಹಿತಿಗಳು ಲೀಕ್ ಆಗಿರುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಬಗ್ಗೆ ಮತ್ತಷ್ಟು ಕುತೋಹಲಗಳು ಹುಟ್ಟಿಕೊಂಡಿವೆ ಎಂದರೆ ತಪ್ಪಾಗಲಾರದು.

ಇನ್ನೇನು ಶೀಘ್ರದಲ್ಲಿಯೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅಫಿಷಿಯಲ್ ಆಗಿ ಬಿಡುಗಡೆಯಾಗುತ್ತದೆ ಎನ್ನುವ ಸುದ್ದಿಯ ಜೊತೆಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಬೆಲೆ ಮತ್ತು ಇತರೆ ಪ್ರಮುಖ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಒನ್‌ಪ್ಲಸ್ ಅಭಿಮಾನಿಗಳಿಗೆ ಈ ಸುದ್ದಿ ಮತ್ತಷ್ಟು ಖುಷಿ ನೀಡಲು ಕಾರಣ ಎಂದರೆ ಒನ್‌ಪ್ಲಸ್ ತಂಡವೇ ಸ್ಮಾರ್ಟ್‌ಫೋನಿನ ಮತ್ತಷ್ಟು ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

ಸ್ನ್ಯಾಪ್‌ಡ್ರಾಗನ್ 845 ಸಿಪಿಯು ಹಾಗೂ 8GB RAM ಮತ್ತು 256GB ಆಂತರಿಕ ಸಂಗ್ರಹದೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಆಪಲ್ 10 ಗೆ ಸೆಡ್ಡು ಹೊಡೆಯುವ ಎಲ್ಲಾ ಲಕ್ಷಣಗಳನ್ನು ನೂತನವಾಗಿ ಬಿಡುಗಡೆಯಾಗಿರುವ ಮಾಹಿತಿಗಳು ನೀಡುತ್ತಿವೆ. ಹಾಗಾದರೆ, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಕಾಲಿಡಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿರಿ.

ಇದೇ ಮೊದಲ ಬಾರಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಮೊದಲ ಪೋಟೊ ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಐಫೋನ್ 10 ಮಾದರಿಯ ಡಿಸ್‌ಪ್ಲೇ ನೋಚ್ ,ವುಡನ್ ಬ್ಯಾಕ್ ಪ್ಯಾನಲ್ ವಿನ್ಯಾವನ್ನು ಹೊಂದಿರುವ ಒನ್‌ಪ್ಲಸ್ 6 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಮತ್ತು 3.5mm ಆಡಿಯೋ ಜಾಕ್ ಕೂಡ ಸ್ಮಾರ್ಟ್‌ಫೋನಿನಲ್ಲಿ ಇರಲಿದೆ.!!

ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಹೇಳಿರುವಂತೆ ಒನ್‌ಪ್ಲಸ್ 6 ಫೋನಿನಲ್ಲಿ ಕ್ವಾಲ್ಕಮ್‌ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ.! ಪ್ರಸ್ತುತ ಅತ್ಯುತ್ತಮ ಮೊಬೈಲ್ ಚಿಪ್‌ಸೆಟ್ ಎಂದು ಹೆಸರಾಗಿರುವ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅನ್ನು ಗ್ರಾಹಕರು ಕೂಡ ಎದುರು ನೋಡುತ್ತಿದ್ದಾರೆ.!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಫೇಸ್‌ಐಡಿ ಫೀಚರ್ ಅನ್ನು ಹೊಂದಿದ್ದರೂ ಸಹ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಉತ್ತಮದರ್ಜಿಗೇರಿಸಲು ಒನ್‌ಪ್ಲಸ್ ಮುಂದಾಗಿದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ತರುವ ಸೂಚನೆಯನ್ನು ಒನ್‌ಪ್ಲಸ್ ಕಂಪೆನಿ ನೀಡಿದೆ.!!

ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯದ್ಬುತ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರಲಿದೆ.! ಪ್ರಸ್ತುತ ಇರುವ ವಾಟರ್‌ಪ್ರೂಫ್ ತಂತ್ರಜ್ಞಾನಕ್ಕಿಂತಲೂ ಅತ್ಯುತ್ತಮ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಒನ್‌ಪ್ಲಸ್ ಕಂಪೆನಿ ಹೆಳಿದೆ.!!

ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಕ್ರೀನ್‌ನಲ್ಲಿಯೇ ನೀಡುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 18:9 ಅನುಪಾತದ ಬೆಜೆಲ್‌ಲೆಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಆದರೆ, ಎಡ್ಜ್ ಟು ಎಡ್ಜ್ ಪೂರ್ತಿ ಪರದೆ ಅಳವಡಿಸಲು ಒನ್‌ಪ್ಲಸ್ ಕಂಪೆನಿ ಉತ್ಸುಕವಾಗಿಲ್ಲ ಎಂದು ಒನ್‌ಪ್ಲಸ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.!!

ಒನ್‌ಪ್ಲಸ್ 5T ಇನ್ನಿತರ ಫೀಚರ್‌ಗಳ ಜೊತೆ ಹೊಸದಾಗಿ ಹಲವು ಫೀಚರ್‌ಗಳು ಸೇರಿ ಒನ್‌ಪ್ಲಸ್ 6 ಹೊರಬರುತ್ತಿದೆ.! ಅಂತಹ ಫೀಚರ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಒಂದಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡುವ ತವಕದಲ್ಲಿ ಒನ್‌ಪ್ಲಸ್ ಕಂಪೆನಿ ಇದೆ.!!

ಭಾರೀ ನಿರೀಕ್ಷೆ ಹಿಟ್ಟಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಜೂನ್ 2018 ಕ್ಕಿಂತ ಮುಂಚಿತವಾಗಿ ಬಿಡುಗಡೆಯಾಗಲಿದೆ . ಹಿಂದೆಂದಿಗಿಂತಲೂ ಅತ್ಯುತ್ತಮ ಹ್ಯಾಂಡ್ಸೆಟ್ ಅನ್ನು ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆಯಾಗಲಿದೆ ಎಂದು ಒನ್‌ಪ್ಲಸ್ ಕಂಪೆನಿಯ ಸಿಇಒ ಪೀಟ್ ಲೌ ಸುಳಿವು ನೀಡಿದ್ದಾರೆ.

ಎಲ್ಲಾ ಹೈ ಎಂಡ್ ಫೀಚರ್ಸ್ ಅನ್ನೇ ಹೊತ್ತಿ ಬಂದಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಬಗ್ಗೆ ಬಹುತೇಕ ನಿಖರ ಎನ್ನಬಹುದಾದ ಬೆಲೆ ಮಾಹಿತಿ ಲೀಕ್ ಆಗಿದೆ. ಹತ್ತಾರು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಒನ್‌ಪ್ಲಸ್ ಸ್ಮಾರ್ಟ್‌ಫೋನಿನ 8GB RAM ಮತ್ತು 256GB ರಾಮ್ ರೂಪಾಂತರದ ಸ್ಮಾರ್ಟ್‌ಫೋನ್ ಬೆಲೆ ಸುಮಾರು. 40,000ಕ್ಕಿಂತ ಕಡಿಮೆ ಇರಲಿದೆಯಂತೆ.! ಅಂದರೆ ಆಪಲ್ ಎಕ್ಸ್ ಶವಪೆಟ್ಟಿಗೆ ಕೊನೆಮೊಳೆ ಹೊಡೆಯಲು ಒನ್‌ಪ್ಲಸ್ 6 ಮಾರುಕಟ್ಟೆಗೆ ಬರುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.