ಕಾಮನ್ ವೆಲ್ತ್ ನಲ್ಲಿ ಚಿನ್ನನೂ ನಮ್ಮದೇ ಬೆಳ್ಳಿನೂ ನಮ್ಮದೇ

BREAKING NEWS, International, National, News, Sports No Comments on ಕಾಮನ್ ವೆಲ್ತ್ ನಲ್ಲಿ ಚಿನ್ನನೂ ನಮ್ಮದೇ ಬೆಳ್ಳಿನೂ ನಮ್ಮದೇ 11

ಗೋಲ್ಡ್‌‌‌ಕೋಸ್ಟ್‌: ಕಾಮನ್‌ವೆಲ್ತ್‌ ಗೇಮ್ಸ್‌‌ನ ಮಹಿಳೆಯರ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಎರಡೂ ಪದಕಗಳನ್ನು ತನ್ನದಾಗಿಸಿಕೊಂಡಿದೆ.. ಮಹಿಳೆಯರ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಭಾರತದವರೇ ಆದ ಸೈನಾ ನೆಹ್ವಾಲ್‌ ಹಾಗೂ ಪಿ.ವಿ.ಸಿಂಧು ಮುಖಾಮುಖಿಯಾಗಿದ್ದರು. ಇದರಲ್ಲಿ ಸೈನಾ ನೆಹ್ವಾಲ್‌ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

21-18, 23-21 ಅಂತರದಿಂದ ಸಿಂಧು ಅವರನ್ನು ಸೈನಾ ಸೋಲಿಸಿದ್ದು, ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಈ ಹಿಂದೆ ಲಂಡನ್‌‌ ಒಲಿಂಪಿಕ್ಸ್‌ನ ಸೈನಾ ನೆಹ್ವಾಲ್‌‌ ಕಂಚಿನ ಪದಕ ಗೆದ್ದಿದ್ದರು. ಇತ್ತ, ರಿಯೋ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.

 

Related Articles

Leave a comment

Back to Top

© 2015 - 2017. All Rights Reserved.