ದಿಲ್ ಸೇ ಸೂಪರ್ ಹಿಟ್ ಹಾಡಿನಲ್ಲಿದೆ ಶಾರುಕ್ ರಹಸ್ಯ

Entertainment, Top News No Comments on ದಿಲ್ ಸೇ ಸೂಪರ್ ಹಿಟ್ ಹಾಡಿನಲ್ಲಿದೆ ಶಾರುಕ್ ರಹಸ್ಯ 15

ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಪ್ರೀತಿ ಜಿಂಟಾ, ಮನಿಷಾ ಕೋಯಿರಾಲಾ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ ಚಿತ್ರ ‘ದಿಲ್ ಸೇ’. 1998ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿಯಾಯಿತು. ಮಣಿರತ್ನಂ ಇದನ್ನು ನಿರ್ದೇಶಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಚಿತ್ರ. ಇದರಲ್ಲಿ “ಜಿಯಾ ಜಲೆ..” ಹಾಡು ತುಂಬಾ ಜನಪ್ರಿಯವಾಗಿತ್ತು. ಈ ಹಾಡಿಗೆ ಫರಾಖಾನ್ ಕೊರಿಯೋಗ್ರಫಿ ಮಾಡಿದ್ದಾರೆ. ಆದರೆ ಈ ಹಾಡಿನಲ್ಲಿ ಶಾರುಖ್‌ ಗಿಂತಲ್ಲೂ ಹೆಚ್ಚಾಗಿ ಪ್ರೀತಿ ಜಿಂಟಾ ಕಾಣಿಸುತ್ತಾರೆ. ಇದಕ್ಕೆ ಕಾರಣ ಶಾರುಖ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳದಿರುವುದೇ ಕಾರಣ ಎಂದು ಫರಾ ಖಾನ್ ಬಹಿರಂಗಪಡಿಸಿದ್ದಾರೆ.

“ಜಲಪಾತದ ಬಳಿ ತೆರೆಗೆ ತಂದ ಸನ್ನಿವೇಶಗಳಲ್ಲಿ ನೀನು ಕೇವಲ ಬಿಳಿ ಧೋತಿ ಮಾತ್ರ ಧರಿಸಬೇಕು, ಇನ್ನೇನು ಹಾಕಿಕೊಳ್ಳಬಾರದೆಂದು ಶಾರುಖ್‌ಗೆ ತಮಾಷೆಗೆ ಸುಳ್ಳು ಹೇಳಿದೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಿದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶೂಟಿಂಗ್‌ ಗೆ ಚಕ್ಕರ್ ಹಾಕಿದ. ತನ್ನ 25 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಸೆಟ್‌ ಗೆ ಬರದೆ ಇದ್ದದ್ದು ಇದೇ ಮೊದಲು. ದಾರಿ ತಪ್ಪಿದೆ ಎಂದು ಹೇಳಿದ. ಆಗ ಗೂಗಲ್ ಮ್ಯಾಪ್‌ ಗಳು ಇರಲಿಲ್ಲ. ಕೇರಳದ ಕಾಡೊಂಡರಲ್ಲಿ ಅದರ ಶೂಟಿಂಗ್ ನಡೆಯಿತು”.

ಒಮ್ಮೆ ಆ ಹಾಡನ್ನು ನೀವು ಗಮನಿಸಿದರೆ ಜಲಪಾತದ ಬಳಿಯ ಸನ್ನಿವೇಶದಲ್ಲಿ ಪ್ರೀತಿ ಒಂಟಿಯಾಗಿ ಉಳಿದ ಡಾನ್ಸರ್ ಜತೆಗೆ ಇರುತ್ತಾರೆ. ಇದಕ್ಕೆ ಕಾರಣ ಶಾರುಖ್ ಬರದೆ ಇದ್ದದ್ದು” ಎಂಬ ಸತ್ಯವನ್ನು ಫರಾ ಖಾನ್ ಬಹಿರಂಗಪಡಿಸಿದ್ದಾರೆ. ವಿಶೇಷ ಎಂದರೆ ಪ್ರೀತಿ ಜಿಂಟಾ ನಟಿಯಾಗಿ ಪರಿಚಯವಾದ ಮೊದಲ ಸಿನಿಮಾ ಇದು.

Related Articles

Leave a comment

Back to Top

© 2015 - 2017. All Rights Reserved.