ಕಾಂಗ್ರೆಸ್ ಪಟ್ಟಿ ಬಿಡುಗಡೆ ಮುನ್ನವೇ ತರೀಕೆರೆಯಲ್ಲಿ ಬಂಡಾಯದ ಬಿಸಿ

BREAKING NEWS, News, Regional, Top News No Comments on ಕಾಂಗ್ರೆಸ್ ಪಟ್ಟಿ ಬಿಡುಗಡೆ ಮುನ್ನವೇ ತರೀಕೆರೆಯಲ್ಲಿ ಬಂಡಾಯದ ಬಿಸಿ 9
ತರೀಕೆರೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಮೊದಲೇ ಬಂಡಾಯದ ಬಿಸಿ ಕಾಂಗ್ರೆಸ್ಸಿಗಾಗಿದೆ. ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ ಅವರಿಗೆ ಪಕ್ಷ ಟಿಕೇಟ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ‌. ಈ ವಿಷಯ ತಿಳಿಯುತ್ತಿದ್ದಂತೆ, ಶ್ರೀನಿವಾಸ ಅವರ ಮನೆಯಲ್ಲಿ ಸಭೆ ಸೇರಿರುವ ಅಭಿಮಾನಿಗಳು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದಿದ್ದಲ್ಲಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಶ್ರೀನಿವಾಸ ಪತ್ನಿ ವಾಣಿ ಶ್ರೀನಿವಾಸ, ಕ್ಷೇತ್ರದಲ್ಲಿ ನನ್ನ ಪತಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ ಈಗ ಟಿಕೆಟ್ ಕೈ ತಪ್ಪಿದರೆ ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣ, ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ಇನ್ನೂಟಿಕೇಟ್ ಘೋಷಣೆ ಮಾಡುವ ಮೊದಲೇ ಬಂಡಾಯದ ಬಿಸಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ.

Related Articles

Leave a comment

Back to Top

© 2015 - 2017. All Rights Reserved.