
ಸಿದ್ದರಾಮಯ್ಯಗೆ ಮೋಕ್ಷ ತೋರಿಸ್ತೇವೆ ಬರಲಿ ಎಂದ ಜಿಟಿ ದೇವೇಗೌಡ
BREAKING NEWS, News, Regional April 15, 2018 No Comments on ಸಿದ್ದರಾಮಯ್ಯಗೆ ಮೋಕ್ಷ ತೋರಿಸ್ತೇವೆ ಬರಲಿ ಎಂದ ಜಿಟಿ ದೇವೇಗೌಡ 20ಮೈಸೂರು : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಂತದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಮಾಹಿತಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಮೋಕ್ಷ ತೋರಿಸಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಮೊದಲು ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ನನ್ನ ಜನ್ಮ, ಮರುಜನ್ಮ, ಮೋಕ್ಷ, ಎಲ್ಲವೂ ಇಲ್ಲಿಯೇ ಎಂದು ಹೇಳಿದ್ದರು. ಆದರೆ ಈಗ ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧೆ ಎಂದು ಅಂತಿಮವಾದ ಬಳಿಕ ಜಿಟಿ ದೇವೇಗೌಡ, ಇಲ್ಲೇ ಸಿದ್ದರಾಮಯ್ಯ ಅವರಿಗೆ ಮೋಕ್ಷ ತೋರಿಸಲಾಗುತ್ತದೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.
Leave a comment