ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲೇ ಪರಿಷ್ಕರಣೆ..??

BREAKING NEWS, News, Regional No Comments on ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲೇ ಪರಿಷ್ಕರಣೆ..?? 17

ನವದೆಹಲಿ : ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲೇ ಆಕಾಂಕ್ಷಿಗಳು ಟಿಕೇಟ್ ದೊರೆತಿಲ್ಲ ಎಂದು ರಾಜ್ಯದ ಹಲವೆಡೆ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಹಲವು ಹಾಲಿ ಶಾಕಸರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ. ಹೀಗಾಗಿ ಬಾಗಲಕೋಟೆ, ತುಮಕೂರು, ಜಗಳೂರು, ತರೀಕೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಈ ಘಟನೆಗಳ ಬೆನ್ನಿಗೆ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಇದರ ಮಧ್ಯೆ, ಚುನಾವಣಾ ಸಮಿತಿ ಸದಸ್ಯ ಮುಕುಲ್ ವಾಸ್ನಿಕ್, ಅಭ್ಯರ್ಥಿಗಳ ಅಂತಿಮ ಪಟ್ಟಿಗೆ ಸಹಿ ಹಾಕಿ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಅಂತಿಮ ಪಟ್ಟಿಗೆ ಪ್ರಧಾನ ಕಾರ್ಯದರ್ಶಿಗಳೇ ಸಹಿ ಹಾಕಬೇಕು ಎಂಬ ನಿಯಮವಿದೆ ಎಂದು ತಿಳಿದು, ಇದೀಗ ದೆಹಲಿಯಲ್ಲಿಯೇ ಇರುವ ಅಶೋಕ ಗೆಹ್ಲೇಟ್ ಅವರಿಂದ ಸಹಿ ಹಾಕಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ ಏನೇ ಆದರೂ, ಇಂದು ರಾತ್ರಿಯ ಒಳಗೆ ಪಟ್ಟಿಯನ್ನು ಕಾಂಗ್ರೆಸ್ ವೆಬ್’ಸೈಟ್’ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ

Related Articles

Leave a comment

Back to Top

© 2015 - 2017. All Rights Reserved.