ಚಾಮುಂಡೇಶ್ವರಿ ಕ್ಷೇತ್ರದ ರಹಸ್ಯ ಬಿಚ್ಚಿಟ್ಟ ಡಿಕೆಶಿ

News, Regional No Comments on ಚಾಮುಂಡೇಶ್ವರಿ ಕ್ಷೇತ್ರದ ರಹಸ್ಯ ಬಿಚ್ಚಿಟ್ಟ ಡಿಕೆಶಿ 12

ಬೆಂಗಳೂರು: ರಾಜ್ಯದ ಕಣ್ಣು ನೆಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕಾಂಗ್ರೆಸ್‌ ಮುಖಂಡ ಡಿಕೆ ಶಿವಕುಮಾರ್ ಅವರಿಗೆ ಸ್ಫೋಟಕ ಸುದ್ದಿಯೊಂದು ಗೊತ್ತಿದೆಯಂತೆ.

ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ‘ಮೂರು ತಿಂಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಂತಹಾ ಘಟನೆ ನಡೆದಿದೆ ಗೊತ್ತಾ? ಅದನ್ನು ಹೇಳಿದರೆ ನೀವೆಲ್ಲಾ (ಮಾಧ್ಯಮದವರು) ಶಾಕ್ ಆಗ್ತೀರಾ’ ಎಂದು ಕುತೂಹಲ ಕೆರಳಿಸಿದರು.

ಆದರೆ ಆ ಸ್ಫೋಟಕ ಸುದ್ದಿ ಏನು ಎಂಬುದನ್ನು ಹೇಳಲು ಡಿಕೆಶಿ ನಿರಾಕರಿಸಿದರು. ಬಿಜೆಪಿಯ ಶ್ರೀನಿವಾಸಪ್ರಸಾದ್ ಹಾಗೂ ಜೆಡಿಎಸ್‌ ನಡುವೆ ನಡೆದಿದೆ ಎನ್ನಲಾಗುತ್ತಿರುವ ಒಳ ಒಪ್ಪಂದದ ಬಗ್ಗೆ ಡಿಕೆ ಶಿವಕುಮಾರ್ ಅವರು ಸೂಚ್ಯವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಅದಕ್ಕೂ ಮುಂಚೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 8 ಬಾರಿ ಸ್ಪರ್ಧಿಸಿದ್ದಾರೆ, 6 ಬಾರಿ ಗೆದ್ದಿದ್ದಾರೆ, 2 ಬಾರಿ ಸೋತಿದ್ದಾರೆ ಅಲ್ಲಿನ ಪರಿಸ್ಥಿತಿ ಅವರಿಗೆ ಚೆನ್ನಾಗಿ ಗೊತ್ತಿದೆ ಅವರು ಗೆದ್ದು ಬರುತ್ತಾರೆ’ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿರ್ಣಾಯಕ ಎನಿಸಿಕೊಂಡಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ಅವರ ಪರ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಅವರು ತೆರಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ರಾಜ್ಯದ ಯಾವ ಕ್ಷೇತ್ರದಲ್ಲಿ ನನ್ನ ಅವಶ್ಯಕತೆ ಇರುತ್ತದೆಯೊ ಅಲ್ಲೆಲ್ಲಾ ಹೋಗಿ ಪ್ರಚಾರ ಮಾಡುತ್ತೇನೆ ಎಂದರು.

 

Related Articles

Leave a comment

Back to Top

© 2015 - 2017. All Rights Reserved.