ಸಾಗರದಲ್ಲಿ ಹರತಾಳು ಹಾಲಪ್ಪಗೆ ಹಾಲು, ಬೇಳೂರಿಗೆ ಬೇಗುದಿ

News, Regional, Top News No Comments on ಸಾಗರದಲ್ಲಿ ಹರತಾಳು ಹಾಲಪ್ಪಗೆ ಹಾಲು, ಬೇಳೂರಿಗೆ ಬೇಗುದಿ 14
ಬೆಂಗಳೂರು : ಬಿ.ಜೆ.ಪಿ. ಬಿಡುಗಡೆ ಮಾಡಿರುವ 2 ನೇ ಪಟ್ಟಿಯಲ್ಲಿ ಸಾಗರಕ್ಕೆ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಪ್ಪ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬೇಗುದಿಯಲ್ಲಿ ಬೇಯುತ್ತಿದ್ದಾರೆ. ಆಗಿದ್ದಾಗಿಯೂ ಮಾಧ್ಯಮಗಳ ಮುಂದೆ ಟಿಕೆಟ್ ಕೈ ತಪ್ಪಿದರ ಬಗ್ಗೆ ಯಾವುದೇ ಬೇಸರವಿಲ್ಲ. ಪಕ್ಷದ ವಿರುದ್ಧ ಬಂಡಾಯ ಏಳುವುದಿಲ್ಲ ಅಂತ ಬೇಳೂರು ಗೋಪಾಲ ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಆದರೂ ಅವರು ಸೊರಬ ಕ್ಷೇತ್ರದ ವಲಸಿಗ ಅಭ್ಯರ್ಥಿಗೆ ನನ್ನ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದಕ್ಕೆ ಬೇಸರವಿದೆ. ಈ ಬಗ್ಗೆ ನನ್ನ ಕ್ಷೇತ್ರದ ಕಾರ್ಯಕರ್ತರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಅಂತ ತಿಳಿಸಿದ್ದಾರೆ. ಇದೇ ವೇಳೆ ಅವರು ಮಾತು ಮುಂದುವರೆಸಿ ಈ ಹಿಂದೆ ಕ್ಷೇತ್ರ ಸಮೀಕ್ಷೆ ನಡೆಸಿದ ಬಿಜೆಪಿಯಲ್ಲಿ ನನ್ನ ಪರ ಬೆಂಬಲ ವ್ಯಕ್ತವಾಗಿತ್ತು.
ಯಡಿಯೂರಪ್ಪ ಕೂಡ ನನಗೆ ಟಿಕೆಟ್ ಎಂದು ತಿಳಿಸಿದ್ದರು. ಹೇಗೆ ನನಗೆ ಟಿಕೆಟ್ ಕೈತಪ್ಪಿದೆ ಅಂತ ಗೊತ್ತಾಗಿಲ್ಲ. ಪಕ್ಷದ ಹಿರಿಯ ನಾಯಕರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಅಂತ ತಿಳಿಸಿದರು.
ಇತ್ತ ಹಾಲಪ್ಪ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಗರದಲ್ಲಿ ಬಿ.ಜೆ.ಪಿ. ಡಿಜಿಟಲ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಫ್ಲೆಕ್ಸ್ ಗಳನ್ನು ಹರಿದು ಹಾಕಲಾಗಿದೆ. ಡಿಜಿಟಲ್ ವಾಹನದ ಪ್ರಚಾರ ಸಾಮಗ್ರಿಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ, ಯಡಿಯೂರಪ್ಪ ಭಾವಚಿತ್ರಕ್ಕೆ ಹಾನಿ ಮಾಡಿ, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ.
ಬೇಳೂರು ಗೋಪಾಲ ಕೃಷ್ಣ ಟಿಕೆಟ್ ಸಿಗದಿರುವುದರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಖಚಿತವಾಗಿತ್ತಾದರೂ, 

ಹರತಾಳು ಹಾಲಪ್ಪ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದರಿಂದ ಬಿ.ಜೆ.ಪಿ. ನಾಯಕರು ಇಬ್ಬರನ್ನು ಕರೆಸಿ ಚರ್ಚೆ ನಡೆಸಿದ್ದರು. ಅಂತಿಮವಾಗಿ ಹಾಲಪ್ಪಗೆ ಚಾನ್ಸ್ ಸಿಕ್ಕಿದೆ. ಬೇಳೂರಿಗೆ ನಿರಾಸೆಯಾಗಿದೆ.
ಇನ್ನೂ ಹರತಾಳು ಹಾಲಪ್ಪ ನನಗೆ ಟಿಕೆಟ್ ಸಿಕ್ಕಿದ್ದು ಸಂತಸ ತಂದಿದೆ. ನನ್ನ ಸೇವೆಯನ್ನು ಪಕ್ಷ ಗುರುತಿಸಿದ್ದು ಖುಷಿಯಾದ ವಿಚಾರ. ಆದರೆ ಟಿಕೆಟ್ ಸಿಕ್ಕಿದ್ದಕ್ಕೆ ಸಂತೋಷ ಇದೆಯೇ ಹೊರತು, ಯುದ್ಧ ಗೆದ್ದ ಮಾತುಗಳು ಸರಿಯಿಲ್ಲ . ರಾಷ್ಟ್ರೀಯ ಪಕ್ಷ ಎಂದ ಮೇಲೆ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಆದರೆ ಒಬ್ಬರಿಗೆ ಟಿಕೆಟ್ ದೊರೆಯುತ್ತದೆ. ಟಿಕೆಟ್ ದೊರೆತವರಿಗೆ ಸಪೋರ್ಟ್ ಮಾಡುವುದು ಪಕ್ಷದ ಕಟ್ಟಾಳುಗಳ ಕರ್ತವ್ಯ ಎಂಬ ಮಾತುಗಳನ್ನ ಆಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.