ಕೊನೆಗೂ ಅಮೂಲ್ಯ ಮಾವನಿಗೆ ಟಿಕೆಟ್ ಸಿಕ್ತು..

News, Regional No Comments on ಕೊನೆಗೂ ಅಮೂಲ್ಯ ಮಾವನಿಗೆ ಟಿಕೆಟ್ ಸಿಕ್ತು.. 14

ಬೆಂಗಳೂರು:ಪ್ರತಿಷ್ಠಿತ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಗಿಟ್ಟಿಸುವಲ್ಲಿ ಜಿ.ಹೆಚ್‌.ರಾಮಚಂದ್ರ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದಲ್ಲಿ ಇಂದು ಕ್ಷೇತ್ರದ ಉಮೇದುವಾರಿಕೆಯ ಬಿ ಫಾರಂ ಸ್ವೀಕರಿಸಿದ್ದಾರೆ. ಕಳೆದ ವಾರವಷ್ಟೇ ಅವರು ಬಿಜೆಪಿ ತೊರೆದು ಜೆಡಿಎಸ್‌‌ಗೆ ಸೇರ್ಪಡೆಯಾಗಿದ್ದರು.

ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಹೆಚ್‌ಆರ್‌ಗೆ ಪಕ್ಷ ನಿರಾಸೆ ಮೂಡಿಸಿತ್ತು. ಬಂಡಾಯ ಎದ್ದಿದ್ದ ಅವರು ಸೊಸೆ ಹಾಗೂ ಚಿತ್ರನಟಿ ಅಮೂಲ್ಯ ಹಾಗೂ ನೂರಾರು ಕಾರ್ಯಕರ್ತರೊಂದಿಗೆ ಐದು ದಿನದ ಹಿಂದೆ ಜೆಡಿಎಸ್‌‌ಗೆ ಸೇರ್ಪಡೆಯಾಗಿದ್ದರು.

ಜೆಡಿಎಸ್ ಟಿಕೆಟ್‌‌ಗಾಗಿ ಕೂಡ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಖುದ್ದು ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಲ್ಲದೇ ಬೆಂಗಳೂರು ನಗರ ಜಿಲ್ಲೆ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಕೂಡ ಪೈಪೋಟಿ ನಡೆಸಿದ್ದರು. ಪ್ರಕಾಶ್‌‌ಗೆ ಬಹುತೇಕ ಟಿಕೆಟ್ ಘೋಷಣೆ ಆಗಿತ್ತು.

ಈ ನಡುವೆ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ರಾಜರಾಜೇಶ್ವರಿ ನಗರದಿಂದ ಜೆಡಿಎಸ್ ಟಿಕೆಟ್ ಕೇಳಿದ್ದರು. ಇವರು ಕೂಡ ಪ್ರಬಲ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿತ್ತು. ಆದರೆ ಎಲ್ಲರ ಸ್ಪರ್ಧೆ ಮೀರಿ ಜಿಹೆಚ್‌‌ಆರ್ ಟಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

  1. ತಮ್ಮ ಕುಟುಂಬದಿಂದ ಇಬ್ಬರಿಗೆ ಮಾತ್ರ ಟಿಕೆಟ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರು. ಇದೀಗ ಪ್ರಜ್ವಲ್ ರೇವಣ್ಣ ಕೈತಪ್ಪಿರುವ ಟಿಕೆಟ್ ಹೆಚ್‌‌ಡಿಕೆ ಮಾತನ್ನು ಸತ್ಯವಾಗಿಸಿದೆ.

Related Articles

Leave a comment

Back to Top

© 2015 - 2017. All Rights Reserved.