ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹೆಚ್ ಡಿಕೆ

Kannada News, News, Regional, Top News No Comments on ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹೆಚ್ ಡಿಕೆ 19

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಚಂದ್ರಶೇಖರ ಸ್ವಾಮೀಜಿ ಕಣಕ್ಕಿಳಿಯುತ್ತಿದ್ದಾರೆ. ಆದ್ರೆ ಒಕ್ಕಲಿಗ ಸ್ವಾಮೀಜಿಯವರನ್ನೇ ಕರೆತಂದು ಅಖಾಡಕ್ಕಿಳಿಸೋ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಡಿ.ಕೆ. ಶಿವಕುಮಾರ್‌ಗೆ ಫಜೀತಿ ತಂದಿಟ್ಟಿದ್ದಾರೆ.
ಹೇಗೆ ಪಜೀತಿ ಹತ್ತಿಕೊಂಡಿದೆ ಅಂದ್ರೆ, ಕಾಂಗ್ರೆಸ್‌ ಪಕ್ಷದಿಂದ ಸುಷ್ಮಾ ರಾಜಗೋಪಾಲ ರೆಡ್ಡಿಯನ್ನು ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಾಡಲಾಗಿದೆ. ಆದ್ರೆ ಸುಷ್ಮಾ ರಾಜಗೋಪಾಲ ರೆಡ್ಡಿ, ತನಗೆ ಕ್ಷೇತ್ರದ ಪರಿಚಯ ಇಲ್ಲದೆ ಇರೋದ್ರಿಂದ ಬೊಮ್ಮನಹಳ್ಳಿಯಿಂದ ಕಣಕ್ಕಿಳಿಯಲು ಒಲ್ಲೆ ಅಂತಾ ನಿರಾಕರಿಸಿದ್ದರು. ಕಡೆಗೆ ಸುಷ್ಮಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಡಿ.ಕೆ. ಶಿವಕುಮಾರ್, ಬೊಮ್ಮನಹಳ್ಳಿಯಲ್ಲಿ ತಾವೇ ಜವಾಬ್ಧಾರಿ ವಹಿಸಿಕೊಳ್ಳುತ್ತಿದ್ದು, ಯಾವ ಚಿಂತೆಯೂ ಇಲ್ಲದಂತೆ ನಾಮಪತ್ರ ಸಲ್ಲಿಸಲು ಸಲಹೆ ನೀಡಿದ್ದರು. ಡಿಕೆಶಿ ಅಭಯದ ಮೇರೆಗೆ ಸುಷ್ಮಾ ಅವರು ನಾಮಪತ್ರ ಸಲ್ಲಿಸೋಕ್ಕೂ ಮನಸ್ಸು ಮಾಡಿದ್ದಾರೆ. ಅಷ್ಟರಲ್ಲೇ ಜೆಡಿಎಸ್‌ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಒಕ್ಕಲಿಗ ಸ್ವಾಮೀಜಿ ಚಂದ್ರಶೇಖರ್ ಅವರನ್ನ ಅಖಾಡಕ್ಕಿಳಿಸೋದಾಗಿ ಘೋಷಿಸಿಬಿಟ್ಟಿದ್ದಾರೆ.
ಸ್ವಾಮೀಜಿ ವಿರುದ್ಧ ಪ್ರಚಾರ ಮಾಡ್ತಾರಾ ಡಿಕೆಶಿ?
ಸುಷ್ಮಾ ಅವರ ಪರವಾಗಿ ಡಿಕೆಶಿಯವರೇ ಬೊಮ್ಮನಹಳ್ಳಿಯಲ್ಲಿ ಪ್ರಚಾರದ ಜವಾಬ್ಧಾರಿ ವಹಿಸಿಕೊಂಡಿದ್ದರು. ಆದ್ರೆ ಚಂದ್ರಶೇಖರ ಸ್ವಾಮೀಜಿಯವರು ಅಖಾಡದಲ್ಲಿರುವಾಗ ಅವರ ವಿರುದ್ಧ ಪ್ರಚಾರ ಮಾಡ್ತಾರಾ ಅನ್ನೋದೇ ಸದ್ಯದ ಕುತೂಹಲ. ಯಾಕಂದ್ರೆ ಒಕ್ಕಲಿಗ ಸ್ವಾಮೀಜಿಯೇ ಕಣದಲ್ಲಿರುವಾಗ, ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಲ್ಲಿ, ಸ್ವಾಮೀಜಿ ವಿರುದ್ಧವೇ ಡಿಕೆಶಿ ಕೆಲಸ ಮಾಡಿದಂತಾಗುತ್ತದೆ. ಇದು ರಾಮನಗರ ಜಿಲ್ಲೆಯ ಒಕ್ಕಲಿಗರಲ್ಲಿ ಬೇರೆಯದ್ದೇ ಸಂದೇಶ ರವಾನೆಗೆ ಆಸ್ಪದವಾಗಲಿದೆ. ಹೀಗಾಗಿ ಡಿಕೆಶಿಗೆ ಸದ್ಯ ಬೊಮ್ಮನಹಳ್ಳಿಯಲ್ಲಿ ಪ್ರಚಾರ ಕೈಗೊಳ್ಳೋದೇ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ಒಂದೇ ಏಟಿಗೆ ಎರಡು ಹಕ್ಕಿ ಹೊಡೆದರಾ ಹೆಚ್‌ಡಿಕೆ?
ಬೊಮ್ಮನಹಳ್ಳಿಯಲ್ಲಿ ಒಕ್ಕಲಿಗ ಮತಗಳು ಹೆಚ್ಚಿರೋದು ನಿಜ. ಹೀಗಾಗಿಯೇ ಜೆಡಿಎಸ್‌ನಿಂದ ಸ್ವಾಮೀಜಿಯವರನ್ನೇ ಕಣಕ್ಕಿಳಿಸಲಾಗಿದೆ. ಇದೀಗ ಒಕ್ಕಲಿಗ ಮತಗಳನ್ನ ಕಾಂಗ್ರೆಸ್‌ ಕಡೆ ಸೆಳೆಯೋದು ಡಿಕೆಶಿಗೆ ಕಷ್ಟವಾಗೋದು ಪಕ್ಕಾ. ಇದಕ್ಕಾಗಿ ಏನೇ ತಂತ್ರಗಳನ್ನು ಹೆಣೆದರೂ ಅವೆಲ್ಲವೂ ಸ್ವಾಮೀಜಿ ವಿರುದ್ಧದ ತಂತ್ರವಾಗಿ ಬಿಂಬಿತವಾಗೋ ಅಪಾಯವಿದೆ. 

ಇನ್ನೊಂದ್ಕಡೆ ಬಿಜೆಪಿಯ ಒಕ್ಕಲಿಗ ನಾಯಕರಿಗೂ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿಯೋದು ಬಿಸಿತುಪ್ಪವಾಗಿ ಪರಿಣಮಿಸಬಹುದಾಗಿದೆ. ಮುಖ್ಯವಾಗಿ ಬೆಂಗಳೂರಿನ ಕ್ಷೇತ್ರಗಳ ಆರ್. ಅಶೋಕ್ ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿರೋದ್ರಿಂದ, ತಮ್ಮದೇ ಸಮುದಾಯದ ಸ್ವಾಮೀಜಿ ವಿರುದ್ಧ ಪ್ರಚಾರ ನಡೆಸೋದು ಅವರಿಗೂ ಮುಳುವಾಗೋ ಅಪಾಯವಿದೆ. ಚಂದ್ರಶೇಖರ ಸ್ವಾಮೀಜಿಯವರನ್ನ ಕಣಕ್ಕಿಳಿಸೋ ಮೂಲಕ ಹೆಚ್‌ಡಿಕೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯೋ ತಂತ್ರ ಹೆಣೆದಿರೋದು ಇಲ್ಲೇ ದೃಢಪಡುತ್ತೆ. ಆದ್ರೆ ಈ ತಲೆನೋವುಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ಹೇಗೆ ನಿಭಾಯಿಸುತ್ತಾರೋ ಅನ್ನೋದೇ ಸದ್ಯದ ಕುತೂಹಲ.

 

Related Articles

Leave a comment

Back to Top

© 2015 - 2017. All Rights Reserved.