ವಿಜಯೇಂದ್ರ ‘ನಿಲ್ಲದ’ ವರುಣಾ

Kannada News, News, Regional, Top News No Comments on ವಿಜಯೇಂದ್ರ ‘ನಿಲ್ಲದ’ ವರುಣಾ 16

ಮೈಸೂರು : ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದ್ದ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೋಟದಪ್ಪ ಬಸವಾರಜು ಅವರನ್ನ ಘೋಷಣೆ ಮಾಡಲಾಗಿದೆ.

ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಯಡಿಯೂರಪ್ಪ ಪುತ್ತ ಬಿವೈ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆಂದು ನಾಮಪತ್ರ ಸಲ್ಲಿಕೆಯ ಕಡೆ ಘಳಿಗೆ ವರೆಗು ಎಲ್ಲರೂ ಎಣಿಸಿದ್ದರು. ಆದ್ರೆ ಅಂತಿಮವಾಗಿ ತೋಟದಪ್ಪ ಬಸವಾರಜು ವರಣಾ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. 

ನಿನ್ಬೆ ನಡೆದ ನಂಜನಗೂಡಯ ಬಿಜೆಪಿ ಸಮಾವೇಶದಲ್ಲಿ ಸದಾನಂದ ಎಂಬುವರನ್ನ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗಿತ್ತು. ಇಂದು ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್  ವಿಜಯೇಂದ್ರ ಕೈ ತಪ್ಪಿದ ಬಳಿಕ ಬಿಜೆಪಿ ಕಾರ್ಯಕರ್ತರು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡರ ಮಗ ಜಿ.ಡಿ ಹರೀಶ್ ಗೌಡರನ್ನ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದರು.ಇನ್ನೂ ಈ ಎಲ್ಲಾ ಬೆಳವಣಿಗೆಗಳ ಮಧ್ಯ ಅಂತಿಮವಾಗಿ ವರುಣಾ ಟಿಕೆಟ್ ತೋಟದಪ್ಪ ಬಸವರಾಜು ಅವರ ಪಾಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.