ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ

BREAKING NEWS, News, Regional, Top News No Comments on ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ 8

ಮಂಡ್ಯ: ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಎಂಬ ದೃಷ್ಠಿಯಿಂದ ಅಂಬರೀಶ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ತ್ಯಾಗವನ್ನು ನಾವು ಎಂದಿಗೂ ಮರೆಯಲ್ಲ ಎಂದು ಇಂಧನ ಸಚಿವ ಡಿಕೆ.ಶಿವಕುಮಾರ್ ಹಾಡಿ ಹೊಗಳಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ ಶಾಸಕ ನರೇಂದ್ರಸ್ವಾಮಿ ಪರ ಪ್ರಚಾರ ಭಾಷಣ ಮಾಡಿದ ನಂತರ ಮಾತನಾಡಿದ ಅವರು, ಅಂಬರೀಶ್ ಅವರ ಗುಣಗಾನ ಮಾಡಿದ್ದಾರೆ. ಅಂಬರೀಶ್ ಅವರಿಗೆ ಆರೋಗ್ಯ ಸರಿಯಿದ್ದಿದ್ದರೆ ಖಂಡಿತ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಎಂಬ ದೃಷ್ಠಿಯಿಂದ ಹಿಂದೆ ಸರಿದಿದ್ದಾರೆ. ಅವರು ಈ ರಾಜ್ಯಕ್ಕೆ ಸಾಕಷ್ಟು ಸೇವೆಮಾಡಿದ್ದಾರೆ. ನಾವೆಲ್ಲರೂ ಅವರ ಮನವೊಲಿಸುವ ಪ್ರಯತ್ನ ಮಾಡಿದೆವು. ಭಗವಂತ ಅವರನ್ನ ಆರೋಗ್ಯವಾಗಿಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್

ಆರೋಗ್ಯ ಸರಿಯಾಗಿ ಮತ್ತೆ ಬಂದರೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಇದೆ. ಅವರ ತ್ಯಾಗವನ್ನು ನಾವು ಮರೆಯಲ್ಲ. ಅವರೊಬ್ಬ ಸ್ನೇಹ ಜೀವಿ. ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿ ಎಂದು ಅಂಬರೀಶ್ ಅವರನ್ನು ಹಾಡಿ ಹೊಗಳಿದ್ದಾರೆ.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಆಗೋದಿಲ್ಲ. ಇದು ಬಿಜೆಪಿಯವರು ಮಾಡಿಸಿರುವ ಸಮೀಕ್ಷೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಡಿಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ರು.

Related Articles

Leave a comment

Back to Top

© 2015 - 2017. All Rights Reserved.