ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕ ಎಸ್ಕೇಪ್!

BREAKING NEWS, Crime No Comments on ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕ ಎಸ್ಕೇಪ್! 27
ಬೆಂಗಳೂರು: ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕನೊಬ್ಬ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ನಡೆದಿದೆ.
ಇಂಜಾಮಮ್ ಉಲ್ ಹಕ್ ಎಂಬ ಯುವಕ ಮುಂಬೈ ಮೂಲದ ಯುವತಿಗೆ ಪ್ರೀತಿಸಿ ವಂಚನೆ ಮಾಡಿದ್ದಾನೆ. ಈತ ಬೆಂಗಳೂರಿನ ಕೆ.ಜಿ. ಹಳ್ಳಿಯವನಾಗಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಇಂಜಾಮಾಮ್ ಉಲ್ ಹಕ್ ಗೆ ಸ್ನೇಹಿತರಿಂದಾಗಿ ಮುಂಬೈ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಪರಿಚಯವಾಗುತ್ತದೆ. ಪರಿಚಯ ಇಬ್ಬರ ನಡುವೆ ಪ್ರೀತಿ ಆಗುತ್ತದೆ. ಬಳಿಕ ಒಂದು ವರ್ಷಗಳ ಕಾಲ ಇಬ್ಬರು ಸಿನಿಮಾ, ಪಾರ್ಕ್ ಮತ್ತು ಪಬ್ ಅಂತೆಲ್ಲ ಸುತ್ತಾಡಿದ್ದಾರೆ. ಅಷ್ಟೇ ಅಲ್ಲದೇ ಇಂಜಾಮಾಮ್ ಉಲ್ ಹಕ್ ಯುವತಿಯನ್ನ ಮದುವೆ ಆಗುವುದಾಗಿ ನಂಬಿಸಿ ಒಂದು ವರ್ಷಗಳ ಕಾಲ ಆಕೆಯೊಂದಿಗೆ ಜೆಪಿ ನಗರದಲ್ಲಿ ಲಿವಿಂಗ್ ಟುಗೇದರ್ ನಲ್ಲಿ ಇದ್ದನು.
ಯುವತಿ ತಾನು ಗರ್ಭಿಣಿ ಆಗಿರುವ ವಿಷಯವನ್ನು ಇಂಜಾಮಾಮ್ ಉಲ್ ಹಕ್‍ಗೆ ತಿಳಿಸಿದ್ದಾರೆ. ನಂತರ ಯುವತಿಯನ್ನ ಕೆ.ಜಿ. ಹಳ್ಳಿಯಲ್ಲಿರುವ ಯುವಕನ ಮನೆಗೆ ಕರಿಸಿ ಆರೋಪಿ ಇಂಜಾಮಾಮ್ ಕುಟುಂಬದವರು ಯುವತಿಯ ಹಲ್ಲೆ ಮಾಡಿ ಬೆದರಿಸಿದ್ದಾರೆ. ನಂತರ ಈ ಘಟನೆ ಬಗ್ಗೆ ನೊಂದ ಯುವತಿ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆ ಮಾಡಿದ್ದ ಪ್ರೀಯಕರ ಹಾಗೂ ಕುಟುಂಬದವರು ಕೆ.ಜಿ ಹಳ್ಳಿಯಲ್ಲಿರುವ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.
ಕೆ.ಜಿ. ಹಳ್ಳಿ ಪೊಲೀಸರು ಒಂದು ತಿಂಗಳ ಹಿಂದೆ ದೂರು ದಾಖಲಿಸಿಕೊಂಡಿದ್ದರೂ ಯುವಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪೊಲೀಸರ ಬಳಿ ಕೇಳಲು ಹೋದರೆ ಸರಿಯಾಗಿ ಸಹಕರಿಸುತ್ತಿಲ್ಲ ಅಂತ ನೊಂದ ಯುವತಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.