ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿಗೆ ಮತ್ತೆ ಅಗ್ರಪಟ್ಟ!

BREAKING NEWS, Featured, Technology No Comments on ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿಗೆ ಮತ್ತೆ ಅಗ್ರಪಟ್ಟ! 25
ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲೂ ದೇಶದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಯಾಗಿ ಕ್ಸಿಯೋಮಿ ಹೊರಹೊಮ್ಮಿದೆ.
ದೇಶದ ಸ್ಮಾರ್ಟ್‍ಫೋನ್ ಕಂಪೆನಿಗಳ ಮಾರುಕಟ್ಟೆಯ ಪಾಲನ್ನು ಕೌಂಟರ್ ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದೆ. 31% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ಕ್ಸಿಯೋಮಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಸ್ಥಾನದಲ್ಲಿದೆ.
ರೆಡ್ ಮಿ ನೋಟ್ 5, ರೆಡ್ ಮಿ ನೋಟ್ 5 ಪ್ರೊ ಫೋನ್ ಗಳು ಹೆಚ್ಚು ಮಾರಾಟ ಕಂಡಿದೆ ಎಂದು ವರದಿ ತಿಳಿಸಿದೆ. ಆಫ್ ಲೈನ್ ಮತ್ತು ಆನ್ ಲೈನ್ ಎರಡು ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಹೊಂದುವ ಮೂಲಕ ನಂಬರ್ ಒನ್ ಪಟ್ಟದಲ್ಲಿ ಕ್ಸಿಯೋಮಿ ಮುಂದುವರಿದಿದೆ ಎಂದು ಕೌಂಟರ್ ಪಾಯಿಂಟ್ ತಿಳಿಸಿದೆ.
ಸ್ಯಾಮ್ ಸಂಗ್ 26.2% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದು, ಗೆಲಾಕ್ಸಿ ಜೆ7 ಎನ್‍ಎಕ್ಸ್‍ಟಿ ಮತ್ತು ಗೆಲಾಕ್ಸಿ ಜೆ2 ಮಾಡೆಲ್ ಗಳು ಹೆಚ್ಚು ಮಾರಾಟವಾಗಿದೆ. ವಿವೊ 5.8%, ಒಪ್ಪೊ 5.6% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ 3 ಮತ್ತು 4ನೇ ಸ್ಥಾನದಲ್ಲಿವೆ.
ಹುವಾವೇ ಅವರ ಸಬ್ ಬ್ರಾಂಡ್ ಹಾನರ್ 3.4% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ಮೊದಲ ಬಾರಿಗೆ ಮೊದಲ ಟಾಪ್ 5ರ ಒಳಗಿನ ಸ್ಥಾನವನ್ನು ಪಡೆದುಕೊಂಡಿದೆ. ಹಾನರ್ 9 ಲೈಟ್, ಹಾನರ್ 7ಎಕ್ಸ್ ಮಾಡೆಲ್ ಗಳು ಆನ್ ಲೈನ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿದೆ. ಚೀನಾ ಕಂಪೆನಿಗಳು ದೇಶೀಯ ಮಾರುಕಟ್ಟೆಯಲ್ಲಿ 57% ಪಾಲನ್ನು ಹೊಂದುವ ಮೂಲಕ ಉತ್ತಮ ಪ್ರಗತಿ ಸಾಧಿಸುತ್ತಿವೆ.
ಫೀಚರ್ ಪೋನ್ ಮಾರುಕಟ್ಟೆ ಮೊದಲ ತ್ರೈಮಾಸಿಕದಲ್ಲಿ ಎರಡರಷ್ಟಾಗಿದೆ ಆದರೆ ಸ್ಮಾರ್ಟ್ ಫೋನ್ ನಲ್ಲಿ ಬದಲಾವಣೆಯಾಗಿಲ್ಲ ಎಂದು ತಿಳಿಸಿದೆ. ಫೀಚರ್ ಫೋನ್ ವಿಭಾಗದಲ್ಲಿ ರಿಲಯನ್ಸ್ ಜಿಯೋ 35.8% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ 1ನೇ ಸ್ಥಾನದಲ್ಲಿದೆ. 9.8% ಪಡೆಯುವುದರ ಮೂಲಕ ಸ್ಯಾಮ್ ಸಂಗ್ 2ನೇ ಸ್ಥಾನದಲ್ಲಿದೆ. ಐಟೆಲ್ 9.4%, ನೊಕಿಯಾ 7.3%, ಲಾವಾ 5.6% ಪಡೆಯುವುದರ ಮೂಲಕ 3, 4, 5 ನೇ ಸ್ಥಾನವನ್ನು ಪಡೆದಿವೆ.

 

 

Related Articles

Leave a comment

Back to Top

© 2015 - 2017. All Rights Reserved.