ಖಾಸಗಿ ಶಾಲೆಗಳ ಡೊನೇಷನ್ ಕಡಿವಾಣಕ್ಕೆ ಒತ್ತಾಯಿಸಿ ಕರ್ನಾಟಕ ಸೇನಪಡೆಯಿಂದ ಬೃಹತ್‌ ಪ್ರತಿಭಟನೆ

BREAKING NEWS, News, Regional No Comments on ಖಾಸಗಿ ಶಾಲೆಗಳ ಡೊನೇಷನ್ ಕಡಿವಾಣಕ್ಕೆ ಒತ್ತಾಯಿಸಿ ಕರ್ನಾಟಕ ಸೇನಪಡೆಯಿಂದ ಬೃಹತ್‌ ಪ್ರತಿಭಟನೆ 27

ಮೈಸೂರು: ಖಾಸಗಿ ಶಾಲೆಗಳಲ್ಲಿ ದುಬಾರಿ ಡೊನೇಷನ್ ಮತ್ತು ಹೆಚ್ಚು ಬೋಧನಾ ಶುಲ್ಕ ದ ಹಾವಳಿಯನ್ನು ತಪ್ಪಿಸಬೇಕೆಂದು ಜಿಲ್ಲಾಧಿಕಾರಿಗಳ ಒತ್ತಾಯಿಸಿ ಈ ಪ್ರತಿಭಟನೆ ಕೈಗೊಳ್ಳಲಾಯ್ತಿ.

ಮೈಸೂರಿನ ಕೋರ್ಟ್ ಎದುರಿನ ಗಾಂಧಿ ಪ್ರತಿಮೆಯ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯ್ತು.ಪ್ರತಿಭಟನೆಯ ನೇತೃತ್ವ ವಹಿಸಿದ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ದುಬಾರಿ ಡೊನೇಷನ್ ಹಾಗೂ ಬೋಧನಾ ಶುಲ್ಕ ದ ಹೆಸರಿನಲ್ಲಿ ಪೋಷಕರಿಂದ ಹೆಚ್ಚು ಸುಲಿಗೆ ಮಾಡುತ್ತಿರುವುದರಿಂದ ಬಡ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಸರ್ಕಾರಿ ನಿಯಮಾವಳಿಗಳ ಪ್ರಕಾರ ಶಾಲೆಗಳ ಸೂಚನಾ ಫಲಕದಲ್ಲಿ ಬೋಧನಾ ಶುಲ್ಕ ದ ಹಾಗೂ ಶಾಲೆಯಲ್ಲಿ ಲಭ್ಯವಿರುವ ಸೀಟುಗಳ ವಿವರ ನಮೂದಿಸಬೇಕೆಂಬ ನಿಯಮವಿದ್ದರೂ ಖಾಸಗಿ ಶಾಲೆಗಳು ಈ ನಿಯಮ ಉಲ್ಲಂಘಿಸುತ್ತಿವೆ ಹಾಗೂ ಕಟ್ಟಿದ ಹಣಕ್ಕೆ ಯಾವುದೇ ರಶೀದಿ ಕೊಡದೆ ಶುಲ್ಕ ದ ಹೆಸರಿನಲ್ಲಿ ಲಕ್ಷಾಂತರ ರೂ ವಸೂಲಿ ಮಾಡಿ ಪೋಷಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಜತೆಗೆ ಕಾನೂನು ಬಾಹಿರವಾಗಿ 3 – 4 ತಿಂಗಳು ಮುಂಚಿತವಾಗಿಯೇ ಮುಂದಿನ ಶೈಕ್ಷಣಿಕ ವರ್ಷದ ಬೋಧನಾ ಶುಲ್ಕವನ್ನು ಈ ವರ್ಷದ ಫಲಿತಾಂಶ ಪ್ರಕಟಿಸುವ ಮುನ್ನವೇ ವಸೂಲಿ ಮಾಡಲಾಗುತ್ತಿದೆ. ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿವೆ. ಈ ಕುರಿತು ಅನೇಕ ಬಾರಿ ಹೋರಾಟ ನಡೆಸಿದರೂ ಜಿಲ್ಲಾ ಡಳಿತ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದು ಖಂಡನೀಯ.

ಶಿಕ್ಷಣ ಪ್ರತಿ ಮಕ್ಕಳ ಮೂಲಭೂತ ಹಕ್ಕು. ಎಷ್ಟೆಲ್ಲ ಭಾಗ್ಯಗಳನ್ನು ಉಚಿತವಾಗಿ ನೀಡುತ್ತಿರುವ ಸರ್ಕಾರ, ಬೇರೆಲ್ಲಾ ಬಿಟ್ಟು ಮುಂದೊರಿದಿರುವ ದೇಶಗಳಂತೆ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ಉಚಿತವಾಗಿ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಈ ತಾರತಮ್ಯ ಹೋಗಲಾಡಿಸಲು ದೇಶಾದ್ಯಂತ ” ಏಕ ರೂಪ ಶಿಕ್ಷಣ ” ಜಾರಿ ಮಾಡಬೇಕು. ಜಿಲ್ಲಾಡಳಿತ ಈ ಸಂಬಂಧ ಕೂಡಲೇ ಸಭೆ ಕರೆದು ಖಾಸಗಿ ಶಾಲೆಗಳ ಡೊನೇಷನ್ ಹಾವಳಿಯನ್ನು ತಡೆಗಟ್ಟಿ, ಶಾಲೆಗಳ ಸೂಚನಾ ಫಲಕದಲ್ಲಿ ಬೋಧನಾ ಶುಲ್ಕ ದ ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಆದೇಶಿಸಬೇಕು ಹಾಗೂ ಪೋಷಕರಿಂದ ಪಡೆದ ಅಷ್ಟೂ ಹಣಕ್ಕೆ ರಶೀದಿ ನೀಡುವಂತೆ ಆದೇಶಿಸಬೇಕು, ಇದಕ್ಕೆ ತಪ್ಪಿದಲ್ಲಿಶಾಲೆಯ ಮಾನ್ಯತೆ ರದ್ದು ಗೊಳಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.

ಪ್ರತಿಭಟನೆ ನೇತೃತ್ವ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಪ್ರಜೀಶ ಪಿ, ರವಿತೇಜ, ಜಗದೀಶ್, ಶಾಂತಮೂರ್ತಿ, ಮನುನಾಯಕ್, ಶಾಂತರಾಜೇ ಅರಸ್, ನಂಜುಂಡಸ್ವಾಮಿ, ಸುಬ್ಬೇಗೌಡ, ಸುನಿಲ್ ಕುಮಾರ್ ಬಿ, ಚೆಲುವರಾಜ್, ಮಿನಿ ಬಂಗಾರಪ್ಪ, ಹರೀಶ್, ರಾಧಾಕೃಷ್ಣ ಗುರುಶಂಕರ್, ಸ್ವಾಮಿ, ವಿಜಯೇಂದ್ರ, ಗುರುಮಲ್ಲಪ್ಪ ಕೆಸಿ, ರಾಘವೇಂದ್ರ ಸ್ವಾಮಿ, ನಾಸಿರ್, ಶಬ್ಬೀರ್ , ಬಾಬು, ಆನಂದ್, ಅಕ್ಷಯ್, ರಾಜಕುಮಾರ್ ಶ್ರೀನಿವಾಸ್, ದೀಪಕ್, ಮಹದೇವ ಸ್ವಾಮಿ, ನೀನಾದ್ ನಾಯಕ್, ಮೂರ್ತಿ, ತಿಪ್ಪಯ್ಯ ಮುಂತಾದವರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.