ಲೂಧಿಯಾನ ಸಿಲಿಂಡರ್‌ ಬ್ಲಾಸ್ಟ್‌: ಮೃತರ ಸಂಖ್ಯೆ 3ಕ್ಕೆ, ತನಿಖೆಗೆ ಆದೇಶ

BREAKING NEWS, National, News No Comments on ಲೂಧಿಯಾನ ಸಿಲಿಂಡರ್‌ ಬ್ಲಾಸ್ಟ್‌: ಮೃತರ ಸಂಖ್ಯೆ 3ಕ್ಕೆ, ತನಿಖೆಗೆ ಆದೇಶ 10
ಲೂಧಿಯಾನ : ಇಲ್ಲಿನ ಗಿಯಾಸ್‌ಪುರ ಪ್ರದೇಶದಲ್ಲಿ ನಿನ್ನೆ ಸಂಭವಿಸಿದ್ದ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿದೆ. ನಿನ್ನೆಯ ದಿನ ಒಬ್ಬ  ಮಹಿಳೆ ಈ ದುರಂಕ್ಕೆ ಬಲಿಯಾಗಿದ್ದರೆ ಇಂದು ಇನ್ನಿಬ್ಬರು ಗಾಯಾಳುಗಳು ಕೊನೆಯುಸಿರೆಳೆದರು. 
ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು ಈ ದುರ್ಘ‌ಟನೆಯ ತನಿಖೆಗೆ ಆದೇಶಿಸಿದ್ದಾರೆ. ಗಿಯಾಸ್‌ಪುರ ಪ್ರದೇಶದ ಸಾಮ್ರಾಟ್‌ ಕಾಲನಿಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಸಂಭವಿಸಿತ್ತು. ಓರ್ವ ಮಹಿಳೆ ಮೃತಪಟ್ಟು ಇತರ 34 ಮಂದಿ ಗಾಯಗೊಂಡಿದ್ದರು.
ಸಿಲಿಂಡರ್‌ ಸ್ಫೋಟಗೊಂಡಿದ್ದ ಮನೆಯ ಮಾಲಕನ ಪತ್ನಿ 40ರ ಹರೆಯದ ಸುನೀತಾ ರಾಣಿ ನಿನ್ನೆ ಮೃತಪಟ್ಟಿದ್ದರು. 

 

Related Articles

Leave a comment

Back to Top

© 2015 - 2017. All Rights Reserved.