ಅಮಿತ್ ಷಾ ಹೆಲಿಕ್ಯಾಪ್ಟರ್ ಗೆ ರೈತನ ಹೊಲ ನಾಶ

National, News, Regional No Comments on ಅಮಿತ್ ಷಾ ಹೆಲಿಕ್ಯಾಪ್ಟರ್ ಗೆ ರೈತನ ಹೊಲ ನಾಶ 36

ಬಾಗಲಕೋಟೆ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಲಿಕ್ಯಾಪ್ಟರ್ ಇಳಿಯಲು ನನ್ನ ಹೊಲವನ್ನು ನಾಶ ಮಾಡಿದ್ದಾರೆ ಎಂದು ಇಳಕಲ್ನ ರೈತ ಜಗದೀಶ್ ಕರಡಿ ನ್ನುವವರು ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದಾರೆ.

ಇಳಕಲ್ನ ನಾಗೂರು ರಸ್ತೆ ಬಳಿ ಜಮೀನಿನ ಬದುಗಳನ್ನು ಒಡೆದು ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕರಾದ ಹುನಗುಂದ ಶಾಸಕ ದೊಡ್ಡಗೌಡ ಪಾಟೀಲ್, ಮಂಜು ಶೆಟ್ಟರ್, ಮಲ್ಲಯ್ಯ ಮುಗನೂರ ಮಠ, ಸುಗೂರೇಶ್ ನಾಗಲೋಟಿ,ಶ್ಯಾಮಸುಂದರ್ ಅವರು ನನಗೆ ಬೆದರಿಸಿದ್ದಾರೆ ಎಂದು ಎಲ್ಲರ ವಿರುದ್ಧ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮಕ್ಕೆ ಅಮಿತ್ ಶಾ ಅವರು ಆಗಮಿಸಿಲು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.

Related Articles

Leave a comment

Back to Top

© 2015 - 2017. All Rights Reserved.