ವುಹಾನ್ ಶೃಂಗಸಭೆ ಮುಕ್ತಾಯ : ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಚೀನಾ

International, National, News No Comments on ವುಹಾನ್ ಶೃಂಗಸಭೆ ಮುಕ್ತಾಯ : ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಚೀನಾ 18

ಬೀಜಿಂಗ್: ವುಹಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಶನಿವಾರ ಮಹತ್ವದ ಒಪ್ಪಂದವೊಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಚೀನಾದೊಂದಿಗೆ ಸೇರಿ ಆಫ್ಘಾನಿಸ್ತಾನದಲ್ಲಿ ಆರ್ಥಿಕ ಯೋಜನೆ ಕೈಗೆತ್ತಿಕೊಳ್ಳುವ ಕುರಿತು ನಿರ್ಧರಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜಂಟಿ ಯೋಜನೆಗೆ ಅನುಮೋದನೆ ನೀಡಿದ್ದು, ಹಾಲಿ ಶೃಂಗಸಭೆಯಲ್ಲಿ ಉಭಯ ನಾಯಕರು ಕೈಗೊಂಡಿರುವ ಮೊದಲ ಪ್ರಮುಖ ನಿರ್ಧಾರ ಇದಾಗಿದೆ. ಪ್ರಮುಖವಾಗಿ ಈ ಯೋಜನೆ ಮೂಲಸೌಕರ್ಯ ಅಭಿವೃದ್ದಿಯ ಆಧಾರಿತವಾಗಿದ್ದು, ಉಭಯ ದೇಶದಳ ಅಧಿಕಾರಿಗಳು ಈ ಯೋಜನೆ ಕುರಿತಂತೆ ರೂಪುರೇಷೆ ಸಿದ್ಧಪಡಿಸಿದ್ದಾರೆ.

ಇನ್ನು ತನ್ನ ಆಪ್ತಮಿತ್ರ ಚೀನಾ ದೇಶದ ನಡೆಯಿಂದಾಗಿ ನೆರೆಯ ಪಾಕಿಸ್ತಾನಕ್ಕೆ ತೀವ್ರ ರಾಜತಾಂತ್ರಿಕ ಹಿನ್ನಡೆಯಾಗಿದ್ದು, ತಾಲಿಬಾನಿ ಉಗ್ರ ಸಂಘಟನೆ ಮೂಲಕ ಆಫ್ಘನ್ ಬುಡಕಟ್ಟು ಪ್ರಾಂತ್ಯಗಳಲ್ಲಿ ನಿಯಂತ್ರಣ ಹೊಂದಿರುವ ಪಾಕಿಸ್ತಾನಕ್ಕೆ ಈ ಯೋಜನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಹೊತ್ತಿನಲ್ಲೇ ಚೀನಾ ಕೂಡ ಪಾಕಿಸ್ತಾನದೊಂದಿಗೆ ಸೇರಿ ತಾನು ಆರಂಭಿಸಿರುವ ಸಿಪಿಇಸಿ (ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಯೋಜನೆಯನ್ನೂ ವಿಸ್ತರಿಸಲು ನಿರ್ಧರಿಸಿದ್ದು, ಈ ಸಂಬಂಧ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದೆ.

ಇದರ ಬೆನ್ನಲ್ಲೇ ಚೀನಾ ಆಫ್ಘನ್ ನಲ್ಲಿ ಭಾರತದೊಂದಿಗೆ ಸೇರಿ ಆರ್ಥಿಕ ಯೋಜನೆ ರೂಪಿಸಿದ್ದು, ಪ್ರಮುಖವಾಗಿ ಮೂಲಭೂತವಾದಿಗಳ ಹಾವಳಿಯಿಂದ ನಲುಗುತ್ತಿರುವ ಆಫ್ಘನ್ ನಲ್ಲಿ ಜಂಟಿ ಆರ್ಥಿಕ ಯೋಜನೆ ಮೂಲಕ ಶಾಂತಿ ಸ್ಥಾಪನೆಗೆ ಚೀನಾ ಪ್ರಯತ್ನಿಸಿದೆ ಎಂದು ಚೀನಾ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಕಳೆದ ಡಿಸೆಂಬರ್ ನಲ್ಲೇ ಈ ಬಗ್ಗೆ ಮಹತ್ವದ ಹೆಜ್ಜೆಯನ್ನಿರಿಸಿದ್ದ ಚೀನಾ, ಆಪ್ಘನ್-ಪಾಕಿಸ್ತಾನದೊಂದಿಗೆ ಸೇರಿ ಬೀಜಿಗ್ ನಲ್ಲಿ ತ್ರಿಪಕ್ಷೀಯ ಮಾತುಕತೆ ನಡೆಸಿತ್ತು. ಅದೇ ಕಾರ್ಯಕ್ರಮದಲ್ಲೇ ತನ್ನ ಸಿಪಿಇಸಿ ಯೋಜನೆ ವಿಸ್ತರಣೆ ನಿರ್ಧಾರ ಕೂಡ ಪ್ರಕಟಿಸಿತ್ತು.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಪ್ರವಾಸ ಮತ್ತು ವುಹಾನ್ ಶೃಂಗಸಭೆ ಇಂದು ಅಂತ್ಯಗೊಳ್ಳಲಿದೆ

Related Articles

Leave a comment

Back to Top

© 2015 - 2017. All Rights Reserved.