ಕ್ರಿಶ್ಚಿಯನ್ ಸಂಪ್ರದಾಯದಂತೆ ಚಿರು ಲೈಫ್ ನಲ್ಲಿ ಮೂಡಿದ ‘ಮೇಘ’ ಮಾಲೆ

Entertainment, News, Regional, Top News No Comments on ಕ್ರಿಶ್ಚಿಯನ್ ಸಂಪ್ರದಾಯದಂತೆ ಚಿರು ಲೈಫ್ ನಲ್ಲಿ ಮೂಡಿದ ‘ಮೇಘ’ ಮಾಲೆ 35

ಬೆಂಗಳೂರು: ಸ್ಯಾಂಡಲ್‍ವುಡ್ ನ ಮೊತ್ತೊಂದು ತಾರಾ ಜೋಡಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆ್ಯಂಥೋನೀಸ್ ಫೈರಿ ಚರ್ಚ್ ನಲ್ಲಿ ಇಂದು ಮಧ್ಯಾಹ್ನ ಮೇಘನಾ ಚಿರಂಜೀವಿ ಸರ್ಜಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ.

ಕಪ್ಪು ಬಿಎಂಡಬ್ಲ್ಯೂ ಕಾರಿನಲ್ಲಿ ಮೇಘನಾ ಹಾಗೂ ಬಿಳಿ ಕಾರಿನಲ್ಲಿ ಚಿರಂಜೀವಿ ಸರ್ಜಾ ಚರ್ಚ್ ಗೆ ಆಗಮಿಸಿದ್ದರು. ಮೇಘನಾ ಪ್ಯೂರ್ ವೈಟ್ ಗೌನ್ ತೊಟ್ಟಿದ್ದು, ಚಿರಂಜೀವಿ ಸರ್ಜಾ ಅವರು ಬ್ಲ್ಯಾಕ್ ಸೂಟ್ ತೊಟ್ಟಿದ್ದರು.

ಚರ್ಚ್ ಫಾದರ್ ಸಮ್ಮುಖದಲ್ಲಿ ಪ್ರೇಯರ್ ಮಾಡಿ ಎರಡು ಕುಟುಂಬಸ್ಥರು ಪ್ರೇಯರ್ ನಲ್ಲಿ ಭಾಗಿಯಾಗಿದ್ದರು. ನಂತರ ಇಬ್ಬರು ಪ್ರಮಾಣ ವಚನ ನೀಡಿ ಬೈಬಲ್ ಮುಟ್ಟಿ ವಧು ವರರು ಮದ್ವೆಗೆ ಸಂಪೂರ್ಣ ಒಪ್ಪಿಗೆ ನೀಡಿದ್ದರು. ಬಳಿಕ ಮೇಘನಾ ಚಿರುಗೆ ರಿಂಗ್ ತೊಡಿಸಿದ್ದಾರೆ. ಚಿರು ಮೇಘನಾಗೆ ಚೈನ್ ಹಾಕಿದ್ದಾರೆ. ಮೇಘನಾ ಗೌನ್ ಧರಿಸಿ ಮಿಂಚಿದ್ರೆ ಚಿರು ಸೂಟ್ ಧರಿಸಿ ಕಂಗೊಳಿಸಿದ್ದಾರೆ.

ಎರಡೂ ಕುಟುಂಬಗಳಿಗೆ ಸಿನಿಮಾ ನಂಟಿರುವುದರಿಂದ ಅನೇಕ ತಾರೆಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಹತ್ತಿರದ ಸಂಬಂಧಿಕರನ್ನ ಮಾತ್ರ ಆಹ್ವಾನಿಸಲಾಗಿತ್ತು.

ವಧು ವರರ ಜೊತೆ ಚಿತ್ರರಂಗದ ತಾರೆಯರಾದ ಹಿರಿಯ ನಟಿ ತಾರಾ, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಐಶ್ವರ್ಯ ಸರ್ಜಾ, ಪ್ರಜ್ವಲ್ ದೇವರಾಜ್ ಬಂದಿದ್ದರು. ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರಾದ್ದರಿಂದ ತಾಯಿ ಕಡೆಯ ಸಂಪ್ರದಾಯದಂತೆ ಇಂದು ಮದುವೆ ನಡೆದಿದೆ. ಮೇ 2 ರಂದು ಅರಮನೆ ಮೈದಾನದಲ್ಲಿ ಮತ್ತೊಮ್ಮೆ ಹಿಂದೂ ಸಂಪ್ರದಾಯದ ಇಬ್ಬರ ಪ್ರಕಾರ ವಿವಾಹ ನಡೆಯಲಿದೆ.

Related Articles

Leave a comment

Back to Top

© 2015 - 2017. All Rights Reserved.