ಕರ್ನಾಟಕ ರಾಜ್ಯಪಾಲರ ಮಗನಿಗೆ ವಂಚನೆ

News, Regional, Top News No Comments on ಕರ್ನಾಟಕ ರಾಜ್ಯಪಾಲರ ಮಗನಿಗೆ ವಂಚನೆ 12

ರಾಜ್‌ಕೋಟ್‌: ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರ ಪುತ್ರ ಭಾವದೀಪ್‌ ವಾಲಾ ಅವರ ಸಹಿ ನಕಲು ಮಾಡಿ ಅವರ ಬ್ಯಾಂಕ್‌ ಖಾತೆಯಿಂದ 43 ಲಕ್ಷ ರೂ. ಎಗರಿಸಿ ವಂಚನೆ ನಡೆಸಿದ ಪ್ರಕರಣ ವರದಿಯಾಗಿದೆ.

 

ಭಾವದೀಪ್‌ ವಾಲಾ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ. ‘‘ಸೌರಾಷ್ಟ್ರ ಆಯಿಲ್‌ ಮಿಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಸಮೀರ್‌ ಶಾ, ಅವರ ಸಹೋದರ ಶ್ಯಾಮ್‌ ಮತ್ತು ವ್ಯಾಪಾರಿ ಸಹವರ್ತಿ ಪರ್ಬಾತ್‌ ಮೂವರು ಸೇರಿ ಚೆಕ್‌ ಮೇಲೆ ನನ್ನ ನಕಲಿ ಸಹಿ ಮಾಡಿ, ಬ್ಯಾಂಕ್‌ ಖಾತೆಯಿಂದ 43 ಲಕ್ಷ ರೂ. ಎಗರಿಸಿ ವಂಚನೆ ಮಾಡಿದ್ದಾರೆ,’’ಎಂದು ಭಾವದೀಪ್‌ ವಾಲಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಪಾದಿಸಿದ್ದಾರೆ. ಭಾವದೀಪ್‌ ವಾಲಾ ಅವರು ಸಮೀರ್‌ ಶಾ ಒಡೆತನದ ರಾಜ್‌ಮೋತಿ ಆಯಿಲ್‌ ಮಿಲ್‌ಗೆ 2006ರ ಏಪ್ರಿಲ್‌ 1ರಿಂದ 2014ರ ಮಾರ್ಚ್‌ 31ರವರೆಗೆ ಪಾಲುದಾರರಾಗಿದ್ದರು. 

Related Articles

Leave a comment

Back to Top

© 2015 - 2017. All Rights Reserved.